ಬಾಗಲಕೋಟೆ : ಬಾಗಲಕೋಟೆಯ ಕಾಂಗ್ರೆಸ್ನಲ್ಲಿ ಟಿಕೆಟ್ ಅಸಮಾಧಾನ ಶಮನ ಆಯ್ತು ಅನ್ನುವಷ್ಟರಲ್ಲಿ, ವೀಣಾ ಕಾಶಪ್ಪನವರು ಮತ್ತೆ ಬಂಡಾಯದ ಬಾಂಬ್ ಸಿಡಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಬಾಗಲಕೋಟೆಯ ನವನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವೀಣಾ ಪ್ರಚಾರದಲ್ಲಿ ಭಾಗಿಯಾಗ್ತಾರೆ ಎಂದಿದ್ದ ಕೈ ಮುಖಂಡರಿಗೆ, ಬೆಂಗಳೂರಿನಿಂದಲೇ ವೀಣಾ ಕಾಶಪ್ಪನವರು ಬಂಡಾಯದ ಸಂದೇಶ ರವಾನೆ ಮಾಡಿದ್ದಾರೆ.
ತಮ್ಮ ಫೇಸ್ಬುಕ್ನಲ್ಲಿ ನನ್ನ ನಡೆ ಸ್ವಾಭಿಮಾನದ ಕಡೆಗೆ ಎಂದು ಪೋಸ್ಟ್ ಹಾಕಿದ್ದಾರೆ. ಅಭಿಮಾನಿಗಳ ಅಭಿಪ್ರಾಯವನ್ನು ಪಡೆದುಕೊಂಡು ಮುಂದಿನ ನಿರ್ಧಾರವನ್ನು ತಿಳಿಸುವುದಾಗಿ ಹೇಳಿದ್ದಾರೆ. ಇಳಕಲ್ನ ಕಾಶಪ್ಪನವರ್ ನಿವಾಸಕ್ಕೆ ಸಚಿವ ಶಿವಾನಂದ ಪಾಟೀಲ್ ಭೇಟಿ ನೀಡಿದರು, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸಚಿವ ಶಿವಾನಂದ ಪಾಟೀಲ್ ಮತ್ತು ವಿಜಯಾನಂದ ಕಾಶಪ್ಪನವರು ಹೇಳಿದ್ದರು.
ಆದರೆ ಬೆಂಗಳೂರಿನಲ್ಲೇ ಕುಳಿತು ಅಭಿಮಾನಿಗಳಿಗೆ, ಹಿತೈಶಿಗಳಿಗೆ ತಾಳ್ಮೆಯಿಂದ ಇರಿ, ನನ್ನ ಪತಿ & ನಾಯಕರ ನಿರ್ಧಾರಕ್ಕೆ ನನ್ನ ಸಮ್ಮತಿ ಇಲ್ಲ. ಹಲವಾರು ನಾಯಕರು ಪ್ರಚಾರಕ್ಕೆ ಬರ್ತಾರೆ ಎಂದು ಹೇಳಿಕೆ ಕೊಟ್ಟಿದ್ದರು. ಆದ್ರೆ ತಾನು ಯಾವುದೇ ಕಾರಣಕ್ಕೂ ಪ್ರಚಾರದಲ್ಲಿ ಭಾಗಿಯಾಗಲ್ಲ.
ಗ್ರಾಮ ಪಂಚಾಯತಿ, ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಿ, ನಿಮ್ಮಲ್ಲರ ಅಭಿಪ್ರಾಯ, ಅನಿಸಿಕೆ ತಿಳಿದುಕೊಂಡು ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ, ನನ್ನ ಅಭಿಪ್ರಾಯ ತಿಳಿಸೊವರೆಗೂ ಸಮಾಧಾನದಿಂದ ಇರಿ ಎಂದು ಅಭಿಮಾನಿಗಳಿಗೆ ವೀಣಾ ಕಾಶಪ್ಪ ಮನವಿ ಮಾಡಿದ್ದಾರೆ.