ಬಾಗಲಕೋಟೆ : ಇಂದಿನಿಂದ ಮೂರು ದಿನಗಳವರೆಗೆ ಬಾಗಲಕೋಟೆ ನಗರದಲ್ಲಿ ಅದ್ಧೂರಿಯಾಗಿ ರಂಗಿನ ಆಟ ಆರಂಭವಾಗಿರುವ ಮೊದಲನೇ ದಿನದ ರಂಗಿನಾಟದಲ್ಲಿ ಕರಿಮಣಿ ಮಾಲೀಕ ಸಾಂಗ್ಗೆ ಕುಣಿದು ಕುಪ್ಪಳಿಸಿದ ಯುವಕ ಯುವತಿಯರು. ಕೊಲ್ಕತ್ತಾ ನಗರವನ್ನು ಹೊರತುಪಡಿಸಿದರೆ ದೇಶದಲ್ಲೇ ಅತಿಹೆಚ್ಚು ಹೋಳಿಯಾಡುವ 2ನೇ ನಗರ ಎಂಬ ಹೆಗ್ಗಳಿಕೆಯನ್ನ ಬಾಗಲಕೋಟೆ ನಗರ ಹೊಂದಿದೆ.
ಇಂದಿನಿಂದ ಮೂರು ದಿನಗಳ ಕಾಲ ಬಾಗಲಕೋಟೆಯ ಆಚರಣೆ ಮಾಡಲಾಗುತ್ತದೆ. ಮೊದಲನೇ ದಿನವಾದ ಇಂದು ವಿದ್ಯಾಗಿರಿಯಲ್ಲಿ ಯುವಕ-ಯುವತಿಯರ ರೇನ್ ಡ್ಯಾನ್ಸ್, ಬಣ್ಣದೋಕುಳಿ ಸಂಭ್ರಮ ಬಾಗಲಕೋಟೆಯ ವಿದ್ಯಾಗಿರಿ ಕಾಲೇಜು ಸರ್ಕಲ್ ನಲ್ಲಿ ಸೋಮವಾರ ಹೋಳಿ ಹಬ್ಬದ ನಿಮಿತ್ತ ಹಬ್ಬದೋಕುಳಿ ನಡೆಯಿತು.
ಭಾನುವಾರ ರಾತ್ರಿ ಕಾಮದಹನ ನಡೆಸಿ ಸೋಮವಾರ ಬೆಳಗ್ಗೆ ಮಕ್ಕಳಾದಿಯಾಗಿ ಯುವಕಯುವತಿಯರು ಹಬ್ಬವನ್ನು ಬಣ್ಣ ಎರೆಚುವ ಮೂಲಕ ಆಚರಿಸಲಾಯಿತು. ಯುವಕರು, ಮಕ್ಕಳ ಗುಂಪು ಕಟ್ಟಿಕೊಂಡು ಬಡಾವಣೆ ತುಂಬಾ ತಿರುಗಾಡಿ ಬಣ್ಣ ಎರಚಿ ಸಂಭ್ರಮಿಸಿದರು. ಚಿಕ್ಕಮಕ್ಕಳು, ಯುವತಿಯರು ಗೃಹಿಣಿಯರು,ಬಣ್ಣ ಎರಚುತ್ತಿರುವುದು ಸಾಮಾನ್ಯವಾಗಿ ಕಂಡು ಬಂತು.