ಅರೇಬಿಯನ್ ಹಾರ್ಸ್ ಅಂತಲೇ ಸಿನಿ ರಂಗದಲ್ಲಿ ಕರೆಸಿಕೊಳ್ಳುವ ಅನುಷ್ಕಾ ಶೆಟ್ಟಿ ಸದ್ದಿಲ್ಲದೆ ಹೊಸ ಸಿನಿಮಾ ಶೂಟಿಂಗ್ ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ… ಸದಾ ಚಾಲೆಂಜಿಂಗ್ ಪಾತ್ರಗಳನ್ನ ಮಾಡಿ ಯಶಸ್ಸು ಕಂಡಿರೋ ನಟಿಗೆ ಈ ರೋಲ್ ಸಖತ್ ಚಾಲೆಂಜಿಂಗ್ ಆಗಿದೆ.. ಕಳೆದ ಒಂದು ವಾರದಿಂದ ಒಡಿಶಾದ ಹಲವು ಕಡೆಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ… ರಮ್ಯಾ ಕೃಷ್ಣ ಸೇರಿದಂತೆ ಹಲವು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.. ಇನ್ನು ಈ ಸಿನಿಮಾಗೆ ವೇದಂ ಖ್ಯಾತಿಯ ಡೈರೆಕ್ಟರ್ ಕ್ರಿಶ್ ಆಕ್ಷನ್ ಕಟ್ ಹೇಳ್ತಾ ಇದ್ದಾರೆ…ಇಷ್ಟಕ್ಕು ಆ ಸಿನಿಮಾ ಯಾವುದು ? ಅನುಷ್ಕಾ ಪಾತ್ರವೇನು ಅನ್ನೋದೇ ಕೂತುಹಲ..
ಮಿಸ್ ಶೆಟ್ಟಿ & ಮಿಸ್ಟರ್ ಪೋಲಿಶೆಟ್ಟಿ ಸಿನಿಮಾ ಬಳಿಕ ಅನುಷ್ಕಾ ಶೆಟ್ಟಿ ಶೀಲವತಿ ಅನ್ನೋ ಟೈಟಲ್ ಅಡಿ ವೇಶ್ಯೆ ಕ್ಯಾರೆಕ್ಟರ್ ಮಾಡ್ತಾ ಇದ್ದಾರೆ..ಇದೊಂದು ಮಹಿಳಾ ಪ್ರಧಾನ ಸಿನಿಮಾ.. ಕ್ರಿಶ್ ನಿರ್ದೇಶನದ ವೇದಂ ಸಿನಿಮಾದಲ್ಲಿ ವೇಶ್ಯೆ ಸರೋಜಾ ಪಾತ್ರದಲ್ಲಿ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ರು.. ಈ ವೇಳೆ ಡೈರೆಕ್ಟರ್ ಕ್ರಿಶ್ ಹಾಗೂ ಅನುಷ್ಕಾ ನಡುವೆ ಏನೋ ಇದೆ ಅನ್ನೋ ಗುಸುಗುಸು ಆರಂಭವಾಗಿತ್ತು.. ಬಳಿಕ ಇಬ್ಬರು ದೂರದೂರವಾಗಿದ್ರು… ಇನ್ಮುಂದೆ ಅವರಿಬ್ಬರು ಒಟ್ಟಿಗೆ ಕೆಲಸ ಮಾಡಲ್ಲ ಅಂತಲೇ ಟಾಲಿವುಡ್ ಭಾವಿಸಿತ್ತು.. ಆದ್ರೀಗ ಸೈಲೆಂಟ್ ಆಗಿ ಹೊಸ ಚಿತ್ರಕ್ಕೆ ಜೊತೆಯಾಗಿದ್ದಾರೆ..
ಒಡಿಶಾದಲ್ಲಿ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಕಟ್ಟಿಕೊಡುತ್ತಿದ್ದಾರೆ ಕ್ರಿಶ್… ಇನ್ನು ಅನುಷ್ಕಾಗೆ ವೃತ್ತಿ ಬದುಕಿನಲ್ಲಿ ಇದೊಂದು ಚಾಲೆಂಜಿಂಗ್ ಟಾಸ್ಕ್.. ಪ್ರಭಾಸ್ ಹೋಂ ಬ್ಯಾನರ್ ಯುವಿ ಕ್ರಿಯೇಷನ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ…ಈ ಹಿಂದೆ ಇದೇ ಸಂಸ್ಥೆ ‘ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ’ ಚಿತ್ರಕ್ಕೆ ಬಂಡವಾಳ ಹೂಡಿತ್ತು. ಕಳೆದ ವರ್ಷ ತೆರೆ ಕಂಡ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಬಾಕ್ಸಾಫೀಸ್ನಲ್ಲಿ ಸಿನಿಮಾ ಗೆಲ್ಲಲಿಲ್ಲ… ಒಡಿಶಾದ ಕೋರಾಪುಟ್ ಜಿಲ್ಲೆಯ ಡಿಯೋಮಾಲಿನಲ್ಲಿ ಚಿತ್ರತಂಡ ಶೀಲವತಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದೆ..
ಜೇಪೋರ್ ಪಟ್ಟಣದ ಮುಖ್ಯ ರಸ್ತೆ, ಸೂರ್ಯ ಮಹಲ್, ಜಗನ್ನಾಥ ಸಾಗರ್ ಬಳಿಯ ಉದ್ಯಾನವನದಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ… ಎಂ. ಎಂ ಕೀರವಾಣಿ ಸಂಗೀತ ಚಿತ್ರಕ್ಕೆ ಇರಲಿದೆ. ಬಾಹುಬಲಿ’ ಸರಣಿ ಬಳಿಕ ಕರಾವಳಿ ಚೆಲುವೆ ಹೆಚ್ಚು ಸಿನಿಮಾಗಳಲ್ಲಿ ನಟಿಸಲಿಲ್ಲ…. ‘ಸೈಜ್ ಜೀರೊ’ ಚಿತ್ರಕ್ಕೆ ತೂಕ ಹೆಚ್ಚಿಸಿಕೊಂಡು ಬಳಿಕ ಮೊದಲಿನಂತಾಗದೇ ಸ್ವೀಟಿಗೆ ಅವಕಾಶಗಳು ಕಮ್ಮಿ ಆಯಿತು ಎನ್ನುವವರು ಇದ್ದಾರೆ… ಆದರೆ ತಾನಾಗಿಯೇ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಮಾಡಿದ್ದಾಗಿ ಸಂದರ್ಶನವೊಂದರಲ್ಲಿ ಆಕೆ ಹೇಳಿಕೊಂಡಿದ್ದರು. ಇದೀಗ ಕ್ರಿಶ್ ಆಕ್ಷನ್ಗೆ ಮತ್ತೆ ಅನುಷ್ಕಾ ಸೈಲೆಂಟಾಗಿ ಸ್ಟೆಪ್ ಹಾಕುತ್ತಿದ್ದಾರೆ.. ವರ್ಷದ ಕೊನೆಯಲ್ಲಿ ಅರೇಬಿಯನ್ ಹಾರ್ಸ್ ಶೀಲವತಿಯಾಗಿ ತೆರೆಮೇಲೆ ಕಾಣುವ ಸಾಧ್ಯತೆ ಇದೆ..