Tuesday, January 27, 2026
26.9 C
Bengaluru
Google search engine
LIVE
ಮನೆ#Exclusive NewsTop Newsಜೋಕಾಲಿ, ರಾಧಾರಮಣ, ಖ್ಯಾತಿಯ ಕಿರುತೆರೆ ನಟಿ ಪವಿತ್ರ ಇನ್ನಿಲ್ಲ!

ಜೋಕಾಲಿ, ರಾಧಾರಮಣ, ಖ್ಯಾತಿಯ ಕಿರುತೆರೆ ನಟಿ ಪವಿತ್ರ ಇನ್ನಿಲ್ಲ!

ಹೈದರಾಬಾದ್ ಸಮೀಪದ ಮೆಹಬೂಬ್ ನಗರದಲ್ಲಿ ಅಪಘಾತಕ್ಕೀಡಾಗಿ ಪವಿತ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇವರು ಕನ್ನಡದ ಸೀರಿಯಲ್​ಗಳಲ್ಲಿ ಮನೆ ಮಾತಾಗಿದ್ದರು. ಕನ್ನಡದ ಹಲವು ಧಾರಾವಾಹಿಗಳಲ್ಲಿ ಮಾತ್ರವಲ್ಲದೇ ಬೇರೆ ಭಾಷೆಯ ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ. ಇಂದು ಇವರು ಮೃತರಾಗಿದ್ದಾರೆ.

 

ಪವಿತ್ರ ಪ್ರಯಾಣಿಸುತ್ತಿದ್ದ ಕಾರು ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ಸಾವಾಗಿದೆ ಎಂದು ಹೇಳಲಾಗಿದೆ. ಮೂಲತಃ ಕನ್ನಡಿಗರಾದ ಪವಿತ್ರ ತೆಲುಗಿನ ತ್ರಿನಯನಿ ಧಾರವಾಹಿಯಲ್ಲಿ ಜನಪ್ರಿಯರಾಗಿದ್ದರು. ಅದರಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದ್ದರು. ಇವರ ಬಗ್ಗೆ ಹೆಚ್ಚಿನ ಪರಿಚಯ ಜನರಿಗೆ ಅಗತ್ಯವಿಲ್ಲ ಎನ್ನುವಷ್ಟು ಜನಪ್ರಿಯತೆ ಗಳಿಸಿದ್ದರು.

ಕನ್ನಡದ ರೋಬೋ ಫ್ಯಾಮಿಲಿ ಮೂಲಜ ಕಿರುತೆರೆಗೆ ಎಂಟ್ರಿಕೊಟ್ಟಿದ್ದ ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು. ನಂತರ ಅವರು ತಮ್ಮದೇ ಆದ ಐಡೆಂಟಿಟಿ ರೂಪಿಸಿಕೊಳ್ಳುವ ಸಲುವಾಗಿ ಬೆಂಗಳೂರಿಗೆ ಬಂದಿದ್ದರು. ನಂತರ ಅವರು ಗ್ರಂಥಾಲಯದಲ್ಲಿ ಹಾಗೂ ಸೇಲ್ಸ್​ ಗರ್ಲ್​ ಆಗಿ ಕೂಡ ಕೆಲಸ ಮಾಡಿದ್ದರಂತೆ. ಜೀವನದಲ್ಲಿ ಹಂತ ಹಂತವಾಗಿ ಮುಂಬರುತ್ತಿರುವವರು ಇವರಾಗಿದ್ದರು.

ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾರಮಣ ಧಾರವಾಹಿಯಲ್ಲಿ ನಟಿಸಿ ಜನಪ್ರಿಯರಾಗಿದ್ದರು. ಮೊದಲು ಸಣ್ಣ ಸಣ್ಣ ಪಾತ್ರಗಳನ್ನು ಅಭಿನಯಿಸುತ್ತಾ ತಾರಾ ಲೋಕಕ್ಕೆ ಕಾಲಿಟ್ಟಿದ್ದರು.ತಮ್ಮ ವೃತ್ತಿಜೀವನದುದ್ದಕ್ಕೂ, ಪವಿತ್ರಾ ಅವರು ಕಾಸ್ಟಿಂಗ್ ಕೌಚ್‌ನಂತಹ ಉದ್ಯಮದ ಕರಾಳ ಮುಖವನ್ನು ಕಂಡಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಕಿರುತೆರೆಯಲ್ಲಿ ಒಂದು ದಿನದ ಕಲಾವಿದೆಯಾಗಿ ಸಂಬಳ ಪಡೆಯುವುದರಿಂದ ಒಂದು ಧಾರಾವಾಹಿಯ ಮುಖ್ಯಪಾತ್ರಧಾರಿಯಾಗುವವರೆಗೆ ಅವರು ಬೆಳೆದಿದ್ದರು. ನಟಿ ಪವಿತ್ರಾ ಜಯರಾಂ ಸಾವಿಗೆ ಕನ್ನಡ ಹಾಗೂ ತೆಲುಗಿನ ಕಿರುತೆರೆ ಲೋಕ ದುಃಖಿತವಾಗಿದೆ. ಇನ್ನೂ ಹೆಚ್ಚಿನ ಕಾಲ ಬದುಕಿ ಬಾಳಬೇಕಿತ್ತು ಎಂದು ಆಶಿಸುತ್ತಿದ್ದಾರೆ.

ಈ ಅನಿರೀಕ್ಷಿತ ಸಾವಿನಿಂದ ಅವರ ಕುಟುಂಬದವರೂ ಸಹ ದುಃಖಿತರಾಗಿದ್ದಾರೆ. ಟಿಂಗ್‌ಗೆಂದು ಹೊರಟಿದ್ದ ನಟಿ ಮರಳಿ ಬಾರದ ಲೋಕಕ್ಕೆ ತೆರಳಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments