ವಾಷಿಂಗ್ಟನ್ : ಕಳೆದೊಂದು ತಿಂಗಳಲ್ಲಿ ಮೂರ್ನಾಲ್ಕು ನೀಲಿ ತಾರೆಯರು ಅಕಾಲಿಕ ಸಾವನ್ನಪ್ಪಿದ್ದಾರೆ. ಇದೀಗ ಅಮೆರಿಕದ ನೀಲಿ ತಾರೆ, ಎಲಿಮಿ ವಿಲ್ಲಿಸ್ ಹೃದಯ ಸ್ತಂಭನದಿಂದ ಕೋಮಾಗೆ ತಲುಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಎಮಿಲಿ ವಿಲ್ಲಿಸ್ ಕೋಮಾಗೆ ತಲುಪಿದ ಸುದ್ದಿ ಹರಿದಾಡುತ್ತಿದ್ದಂತೆ ಪೋರ್ನ್ ಚಿತ್ರರಂಗದಲ್ಲಿ ಭಾರೀ ಚರ್ಚೆಗಳು ಹುಟ್ಟಿಕೊಂಡಿವೆ. ಕಳೆದ ಒಂದು ತಿಂಗಳಲ್ಲಿ ಸೋಫಿಯಾ ಲಿಯೋನ್, ಕಾಗ್ನಿ ಲೀ, ಜೆಸ್ಸಿ ಜೆನ್ ಖ್ಯಾತ ನೀಲಿ ತಾರೆಯರು ಕೊನೆಯುಸಿರೆಳೆದಿದ್ದಾರೆ. ಇದೀಗ ಕೋಮಾ ಸ್ಥಿತಿಗೆ ತಲುಪಿರುವ ಎಮಿಲಿ ವಿಲ್ಲಿಸ್ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎಂದು ಅಮೆರಿಕ ಮಾಧ್ಯಮ ವರದಿಗಳು ತಿಳಿಸಿವೆ.
25 ವರ್ಷ ವಯಸ್ಸಿನ ನೀಲಿ ತಾರೆ ಎಮಿಲಿ ವಿಲ್ಲಿಸ್ ಸೋಶಿಯಲ್ ಮೀಡಿಯಾದಲ್ಲೂ ಅಷ್ಟೇ ಜನಪ್ರಿಯರಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 20 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನ ಹೊಂದಿದ್ದಾರೆ. ಎಮಿಲಿ ಅರ್ಜೆಂಟೀನಾದಲ್ಲಿ ಜನಿಸಿದರೂ ತಮ್ಮ ಜೀವನದ ಬಹುಪಾಲು ಸಮಯವನ್ನು ಅಮೆರಿಕದಲ್ಲೇ ಕಳೆದಿದ್ದಾರೆ.
ಕೆಲ ವರ್ಷ ಪೋರ್ನ್ ಚಿತ್ರೋದ್ಯಮದಲ್ಲಿ ಕೆಲಸ ಮಾಡಿದ ಎಮಿಲಿ, ಕಳೆದ ಎರಡು ವರ್ಷಗಳ ಹಿಂದಷ್ಟೇ ಪೋರ್ನ್ ಚಿತ್ರರಂಗ ತೊರೆದಿದ್ದರು. ಕುಟುಂಬಸ್ಥರ ಸಂಶಯದ ಮೇರೆಗೆ ತನಿಖೆ ಆರಂಭಿಸಿದ್ದ ಯುಎಸ್ ಪೊಲೀಸರು ಎಮಿಲಿ ವಿಲ್ಲಿಸ್ ಈ ಸ್ಥಿತಿಗೆ ಮಾದಕವಸ್ತುವಿನ ಮಿತಿಮೀರಿದ ಸೇವನೆ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.