Wednesday, April 30, 2025
32 C
Bengaluru
LIVE
ಮನೆಸುದ್ದಿ`BMTC’ ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆಯಲ್ಲಿ‌ ವ್ಯತ್ಯಯ : ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಖಡಕ್ ವಾರ್ನಿಂಗ್

`BMTC’ ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆಯಲ್ಲಿ‌ ವ್ಯತ್ಯಯ : ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಖಡಕ್ ವಾರ್ನಿಂಗ್

ಬೆಂಗಳೂರು : ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆಯಲ್ಲಿ‌ ವ್ಯತ್ಯಯವಾದ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಅಸಮಾಧನ ಹೊರಹಾಕಿದ್ದಾರೆ.

ದಿನಾಂಕ 14-05-2024 ರಂದು ಬೆಳಗ್ಗೆ 07:00 ರಿಂದ 11:00 ಘಂಟೆ ವರೆಗೆ ಘಟಕ-03 ರಲ್ಲಿ ಅನುಸೂಚಿಗಳ ಕಾರ್ಯಾಚರಣೆಯಲ್ಲಿ ಉಂಟಾದ ವ್ಯತ್ಯಯಕ್ಕೆ ಸಾರಿಗೆ ಸಚಿವರು ಗರಂ ಆಗಿದ್ದು, ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ ಅವರಿಗೆ ಈ ರೀತಿ ಮುಂದಿನ ದಿನಗಳಲ್ಲಿ ಆಗದಂತೆ ಜಾಗ್ರತೆ ವಹಿಸುವುದು ಹಾಗೂ ಖಾಸಗಿ‌ ಕಂಪನಿಯಾದ M/s TML Smart City Mobility Solutions ಅವರ ಒಪ್ಪಂದ ರದ್ದು ಮಾಡುವ ಬಗ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಮಗೆ ಸಾರ್ವಜನಿಕ ಪ್ರಯಾಣಿಕರಿಗೆ ಅಗತ್ಯ ಸೇವೆ ಒದಗಿಸುವ ಬದ್ಧತೆಯಿದ್ದು, ಆ ನಿಟ್ಟಿನಲ್ಲಿ ‌ಯಾವೆಲ್ಲ ತುರ್ತು ಕ್ರಮ ತೆಗೆದುಕೊಳ್ಳಬೇಕೊ ಅದೆಲ್ಲವನ್ನು ಕೂಡಲೇ ಜರುಗಿಸುವಂತೆ ಸೂಚನೆ ನೀಡಿದ್ದಾರೆ.

ಏತನ್ಮದ್ಯೆ, ಕೇಂದ್ರ ಸರ್ಕಾರದ‌ ನೀತಿಯಾದ ಈ ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆಗೆ ನೇರವಾಗಿ ಬಸ್ಸು ತಯಾರಿಕಾ ಕಂಪನಿಗಳಿಗೆ ಸಬ್ಸಡಿ ನೀಡುವುದರಿಂದ, ಚಾಲಕರು ಖಾಸಗಿ ಕಂಪನಿಯವರೇ ಒದಗಿಸುತ್ತಾರೆ.

ಸಾರಿಗೆ ಸಂಸ್ಥೆಗಳಿಗೆ ಸಬ್ಸಿಡಿ ನೀಡಿದ್ದರೆ ಈಗಾಗುವುದಿಲ್ಲ, ಬಸ್ಸು ಮತ್ತು ಚಾಲಕರು ಸಾರಿಗೆ ಸಂಸ್ಥೆಗಳ‌ ಒಡೆತನದಲ್ಲಿರುತ್ತಾರೆ. ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತಾರೆ. ಇದಕ್ಕೂ ರಾಜ್ಯ ಸರ್ಕಾರಕ್ಕೂ ಏನೂ ಸಂಬಂಧವಿಲ್ಲ. ಖಾಸಗಿ‌ ಚಾಲಕರ ವೇತನ ಪಾವತಿ ಕಂಪನಿ‌ ಸಕಾಲಕ್ಕೆ ಪಾವತಿಸಬೇಕು. ಆದಾಗ್ಯೂ ಸಾರಿಗೆ ಸಚಿವರ ಸೂಚನೆ ಬಂದ ಕೂಡಲೇ ಕಾರ್ಯಪ್ರವೃತ್ತರಾದ ಸಂಸ್ಥೆಯ ಹಿರಿಯ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಿ, ಬಸ್ಸುಗಳ‌ ಕಾರ್ಯಾಚರಣೆ‌ಗೆ ಅನುವು ಮಾಡಿಕೊಟ್ಟಿದ್ದಾರೆ.

ಬೆಂ.ಮ.ಸಾ.ಸಂಸ್ಥೆಯು ಭಾರತ ಸರ್ಕಾರದ ಫೇಮ್-2 ಯೋಜನೆಯಡಿಯಲ್ಲಿ 921, 12 ಮೀ. ಉದ್ದದ ಹವಾನಿಯಂತ್ರಣ ರಹಿತ Low-floor ಎಲೆಕ್ನಿಕ್ ಬಸ್ಸುಗಳನ್ನು Gross Cost Contract (GCC) ಆಧಾರದ ಮೇಲೆ ಕಾರ್ಯಾಚರಿಸುವ ಸಂಬಂಧ M/s. TML Smart City Mobility Solutions Limited ರವರೊಂದಿಗೆ ದಿನಾಂಕ 16-12-2022 ರಂದು ಕರಾರು ಒಪ್ಪಂದ ಮಾಡಿಕೊಂಡಿರುತ್ತದೆ. ಅದರಂತೆ, ಚಾಲಕರ ನಿಯೋಜನೆ ಹಾಗೂ ಎಲೆಕ್ನಿಕ್ ಬಸ್ಸುಗಳ ನಿರ್ವಹಣೆ M/s. TML Smart City Mobility Solutions Limited ರವರ ಹೊಣೆಯಾಗಿರುತ್ತದೆ ಹಾಗೂ ನಿರ್ವಾಹಕರ ನಿಯೋಜನೆಯು ಸಂಸ್ಥೆಯ ಜವಾಬ್ದಾರಿಯಾಗಿರುತ್ತದೆ.

ಪ್ರಥಮ ಹಂತದಲ್ಲಿ, ದಿನಾಂಕ 27-12-2023 ರಂದು ಘಟಕ-03 (ಶಾಂತಿನಗರ) ರಿಂದ ಎಲೆಕ್ನಿಕ್ ಬಸ್ಸುಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿರುತ್ತದೆ.

ಘಟಕ-03 ರಿಂದ ಸಂಪೂರ್ಣ ಎಲೆಕ್ನಿಕ್ ಬಸ್ಸುಗಳನ್ನು ಕಾರ್ಯಾಚರಿಸಲಾಗುತ್ತಿದ್ದು, ಒಟ್ಟಾರೆ 113 ಅನುಸೂಚಿಗಳನ್ನು ಕಾರ್ಯಚರಿಸಬೇಕಿರುತ್ತದೆ. ಆದರೆ, ದಿನಾಂಕ 14-05-2024 ರಂದು M/s. TML Smart City Mobility Solutions Limited ರವರ ಚಾಲಕರ ವೇತನ ಪಾವತಿಯಲ್ಲಿನ ವ್ಯತ್ಯಾಸ ದಿಂದ ಚಾಲಕರು ಪ್ರತಿಭಟನೆ ಮಾಡಿದ್ದರಿಂದ ಘಟಕ-03 ರ 27 ಪಾಳಿ ಹಾಗೂ 46 ಸಾಮಾನ್ಯ ಪಾಳಿಯಲ್ಲಿನ ಅನುಸೂಚಿಗಳ ಕಾರ್ಯಾಚರಣೆಯಲ್ಲಿ ಬೆಳಗ್ಗೆ 07:00 ರಿಂದ 11:00 ಘಂಟೆ ವರೆಗೆ ವ್ಯತ್ಯಯ ಉಂಟಾಗಿರುತ್ತದೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments