ಯಾದಗಿರಿ : ಯಾದಗಿರಿ ಜಿಲ್ಲೆಯ ಗುರುಮಠಕಲ್ನ ಮಾಜಿ ಶಾಸಕ ನಾಗನಗೌಡ ಕಂದಕೂರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಈ ಹಿನ್ನೆಲೆ ನಾಗನಗೌಡ ಕಂದಕೂರು ನಿವಾಸಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್ಸ್ವಾಮಿ ಭೇಟಿ ನೀಡಿದ್ದು, ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ನಿಖಿಲ್ ಕುಮಾರಸ್ವಾಮಿ ಜೊತೆ ಆಗಮಿಸಿದ ಕಲಬುರಗಿ ಸಂಸದ ಉಮೇಶ ಜಾಧವ್ ಹಾಗೂ ನಾಗನಗೌಡ ಕಂದಕೂರು ಅಭಿಮಾನಿ ಬಳಗದವರು ನಾಗನಗೌಡ ಕಂದಕೂರು ಅವರ ಅಂತಿಮ ದರ್ಶನ ಪಡೆದರು.