ವಿಜಯಪುರ : ವಿಜಯಪುರ ನಗರದ ಐತಿಹಾಸಿಕ ಸಿದ್ದೇಶ್ವರ ಸಂಕ್ರಮಣ ಜಾತ್ರೆಯಲ್ಲಿ ಮುಸ್ಲೀಂ ವ್ಯಾಪಾರಿಗಳಿಗೆ ಅವಕಾಶ ನೀಡದೇ ಕೇವಲ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಬೇಕೆಂದು ಆಗ್ರಹಿಸಿ ಹಿಂದೂ ಸಂಘಟನೆಗಳ ಒಕ್ಕೂಟದಿಂದ ದೇವಸ್ಥಾನದ ಮುಂದೆ ಬ್ಯಾನರ್ ಕಟ್ಟಿ ಆಗ್ರಹಿಸಿತು. ಈ ವೇಳೆ ಸಿದ್ದೇಶ್ವರ ಸಂಸ್ಥೆಯ ಸಿಬ್ಬಂದಿ ಬ್ಯಾನರ್ ತೆರವಿಗೆ ಮುಂದಾದಾಗ ಹಿಂದೂ ಸಂಘಟನೆ ಮುಖಂಡ ಹಾಗೂ ಸಂಸ್ಥೆಯ ಸಿಬ್ಬಂದಿ ಮಧ್ಯೆ ವಾಗ್ವಾದ ಜರುಗಿದ ಘಟನೆ ನಡೆದಿದೆ.
ಇದೇ ವೇಳೆ ಐತಿಹಾಸಿಕ ಸಿದ್ದೇಶ್ವರ ಜಾತ್ರೆಯಲ್ಲಿ ಮುಸ್ಲಿಂಮರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಹಿಂದೂ ಸಂಘಟನೆ ಮನವಿ ವಿಚಾರವಾಗಿ ಹಿಂದೂ ಸಂಘಟನೆಗಳು ಹಾಕಿದ್ದ ಬ್ಯಾನರ್ ಗಳನ್ನ ಸಿದ್ದೇಶ್ವರ ಸಂಸ್ಥೆ ಪದಾಧಿಕಾರಿ ತೆರವುಗೊಳಿಸಲು ಮುಂದಾದಾಗ ಶ್ರೀರಾಮ ಸೇನೆ ಮುಖಂಡ ನಿಲಕಂಠ ಕಂದಗಲ್ ಹಾಗೂ ಸಿದ್ದೇಶ್ವರ ಸಂಸ್ಥೆ ಪದಾಧಿಕಾರಿ ನಡುವೆ ವಾಗ್ವಾದ ನಡೆದಿದೆ.
ಸಿದ್ದೇಶ್ವರ ಜಾತ್ರೆಯಲ್ಲಿ ಮುಸ್ಲಿಂಮರಿಗೆ ಅವಕಾಶ ನೀಡದಂತೆ ಹಿಂದೂ ಸಂಘಟನೆಗಳು ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರಿಗೆ ಮನವಿ ಮಾಡಿದ್ದರು. ಸಿದ್ದೇಶ್ವರ ಸಂಸ್ಥೆ ಅಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ್ ಗೆ ಸಹ ಮುಖಂಡರು ಮನವಿ ಮಾಡಿದ್ದರು. ಮನವಿ ಬಳಿಕ ಸಿದ್ದೇಶ್ವರ ದೇವಸ್ಥಾನದ ಮುಂಭಾಗ ಹಿಂದೂ ಸಂಘಟನೆ ಮುಖಂಡರು ಮುಸ್ಲಿಂಮರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದು ಬ್ಯಾನರ್ ಕಟ್ಟದ್ದರು.
ಇಂದು ಏಕಾಏಕಿ ಬ್ಯಾನರ್ ತೆಗೆಯಲು ಸಿದ್ದೇಶ್ವರ ಸಂಸ್ಥೆ ಸಿಬ್ಬಂದಿ ಮುಂದಾದ ವೇಳೆ ಹಿಂದೂ ಸಂಘಟನೆ ಮುಖಂಡರು ಹಾಗೂ ಸಿಬ್ಬಂದಿ ನಡುವೆ ಗಲಾಟೆಯಾಗಿದೆ. ಬ್ಯಾನರ್ ತೆರವು ಮಾಡಲು ಮುಂದಾದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕ ಯತ್ನಾಳ್ ಗೆ ಹಿಂದೂ ಮುಖಂಡರು ಆಗ್ರಹಸಿದರು. ಜನೆವರಿ 12 ರಿಂದ 18 ವರಗೆ ವಿಜಯಪುರದ ಐತಿಹಾಸಿಕ ಸಿದ್ದೇಶ್ವರ ಜಾತ್ರೆ ನಡೆಯಲಿದೆ.