ವಿಜಯಪುರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಾನು ಫೈಟರ್ ಎಂದು ಗುಡುಗಿದ್ದಾರೆ. ಮಾಧ್ಯಮಗೋಷ್ಟಿಯಲ್ಲಿ ಮಾತಾಡಿದ ಶೋಭಾ ಕರಂದ್ಲಾಜೆ ಎರಡು ಮೂರು ದಿನಗಳಲ್ಲಿ ನೀತಿ ಸಂಹಿತೆ ಘೋಷಣೆಯಾಗುವ ಸಾಧ್ಯತೆ ಇದೆ, ಪ್ರಧಾನಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಈ ಸಲ 400 ಕ್ಕೂ ಅಧಿಕ ಸೀಟ್ ಗಳು ನಮಗೆ ಸಿಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಟಿಕೆಟ್ ವಿಚಾರವಾಗಿ ಮಾತನಾಡಿದ ಶೋಭಾ ಕರಂದ್ಲಾಜೆ ನಾನು ಫೈಟರ್ ಎಂದು ಗುಡುಗಿದ್ರು. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ನಾವು ಅವರ ಪರವಾಗಿ ಕೆಲಸ ಮಾಡುತ್ತೇವೆ. ಯಾರಿಗೆ ಟಿಕೆಟ್ ಕೊಟ್ಟರು ನಾವು ಅಲ್ಲಿ ಗೆಲ್ಲುತ್ತೇವೆ. ನನ್ನ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನ ಮಾಡಲಾಗಿದೆ. ಅದಕ್ಕಾಗಿ ಅಲ್ಲೇ ನನಗೆ ಟಿಕೆಟ್ ನೀಡಿದರ ಉತ್ತಮ ಎಂದು ಕೇಂದ್ರ ಸಚಿವೆ ತಿಳಿಸಿದ್ರು.
ಒಂದಂತು ಸತ್ಯ, ನಮ್ಮಲ್ಲಿ ಕಾಂಪೀಟೆಷನ್ ಇದೆ. ನನಗೆ ಯಾವುದೇ ಕ್ಷೇತ್ರದಲ್ಲಿ ಟಿಕೆಟ್ ನೀಡಿದರು ಸ್ಪರ್ಧೆ ಮಾಡುತ್ತೇನೆ. ಯಾವುದೋ ದುರುದ್ದೇಶದಿಂದ ನನ್ನ ವಿರುದ್ಧ ಕೆಲವರು ಪಿತೂರಿ ಮಾಡಿದ್ದಾರೆ. ನಾನು ಫೈಟರ್, ಯಾವುದೇ ಕ್ಷೇತ್ರ ಕೊಟ್ಟರು ನಾನು ಸ್ಪರ್ಧೆ ಮಾಡುತ್ತೇನೆ. ಸಿಟಿ ರವಿ ದೆಹಲಿ ಪ್ರವಾಸದ ಬಗ್ಗೆ ವ್ಯಂಗ್ಯವಾಡಿದ ಕೇಂದ್ರ ಸಚಿವೆ ಸಿಟಿ ರವಿ ರಾಷ್ಟ್ರೀಯ ನಾಯಕರು, ಅವರು ದೆಹಲಿಗೆ ಹೋದರೆ ತಪ್ಪಿಲ್ಲ. ನನ್ನ ವಿರುದ್ಧ ಯಾವುದೇ ಕಾರ್ಯಕರ್ತರು ಅಭಿಯಾನ ಮಾಡಿಲ್ಲ. ಕೆಲವು ಗುಂಪುಗಳ ಈ ರೀತಿಯ ಕೆಲಸ ಮಾಡಿವೆ ಎಂದರು
ಇನ್ನು ನಾನು ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ. ತಾಯಿಗೆ ದ್ರೋಹ ಮಾಡುವ ಕೆಲಸ ಮಾಡಿಲ್ಲ ಎಂದ ಸಚಿವೆ ಬೆಂಗಳೂರು ಉತ್ತರ ಕ್ಷೇತ್ರ ನೀಡಿದರು ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ರು. ಪ್ರತಾಪ ಸಿಂಹ, ಈಶ್ವರಪ್ಪ ಪುತ್ರನ ಟಿಕೆಟ್ ಗೊಂದಲ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದ ಸಚಿವರು ತಿಳಿಸಿದ್ರು.