ವಿಜಯಪುರ : ಭಾರತ ಸಂಚಾರ ನಿಗಮ ಲಿಮಿಟೆಡ್ ಜನರಲ್ ಮ್ಯಾನೇಜರ್ ಬಳಕೆ ಮಾಡುತ್ತಿದ್ದ ಕಾರ್ ಜಪ್ತಿ ಮಾಡಲಾಗಿದೆ. ಬಿಎಸ್ಎನ್ಎಲ್ ನಿಂದ ನೀಡಿದ್ದ ಕಾರಿನ ಬದಲಾಗಿ ಬೇರೆ ಕಾರು ಬಳಕೆ ಮಾಡುತ್ತಿದ್ದ ಆರೋಪ ಮೇಲೆ ಜಪ್ತಿ ಮಾಡಲಾಗಿದೆ. ಬೆಳಗಾವಿ ವಿಜಯಪುರ ಬಾಗಲಕೋಟೆ ಜಿಲ್ಲೆಗಳ ಜನರಲ್ ಮ್ಯಾನೇಜರ್ ಆಗಿ ವಿಕಾಸ್ ಜೈಕರ್ ಕೆಲಸ ಮಾಡುತ್ತಿದ್ದರು.
ಬೆಳಗಾವಿಯಿಂದ ಖಾಸಗಿ ಕಾರ್ ಮೂಲಕ ವಿಜಯಪುರದ ಕಚೇರಿಗೆ ಬಂದಿದ್ದ ಜನರಲ್ ಮ್ಯಾನೇಜರ್
ಬಿಎಸ್ಎನ್ಎಲ್ ನಿಂದ KA 22 C 8059 ಎಲೋ ಬೋರ್ಡ್ ಕಾರ್ ನೀಡಲಾಗಿತ್ತು. ಆದ್ರೆ KA 22 C 8059 ನಂಬರಿನ ಕಾರಿನ ಬದಲಾಗಿ KA 22 MB 0494 ನಂಬರಿನ ಕಾರ್ ಬಳಕೆ ಮಾಡಿದ್ದಾರೆ.
ಈ ಕುರಿತು ಜನರಲ್ ಮ್ಯಾನೇಜರ್ ವಿಕಾಸ್ ಜೈಕರ್ ಅವರಿಗೆ ಬಿಎಸ್ಎನ್ಎಲ್ ಸಿನೀಯರ್ ಆಫೀಸ್ ಅಸೋಸಿಯೇಟ್ ಸುರೇಶ ಬಿರಾದಾರ್ ಅವರು ಪ್ರಶ್ನೆ ಮಾಡಿದರು. ಬೆಳಗಾವಿಯಿಂದ ವಿಜಯಪುರಕ್ಕೆ ಪ್ರತಿಬಾರಿ ಪತ್ನಿಯನ್ನು ಕರೆದುಕೊಂಡು ಬರುತ್ತಾರೆಂಬ ಆರೋಪ ಕೇಳಿ ಬಂದಿತ್ತು. ಬೇರೆ ಕಾರು ಬಳಕೆ ಮಾಡುತ್ತಿರೋ ಕುರಿತು ಬಿಎಸ್ಎನ್ಎಲ್ ನೌಕರ 112 ಗೆ ಕರೆ ಮಾಡಿದ್ದರು. ಈ ಕುರಿತು ಸ್ಥಳಕ್ಕೆ ಆಗಮಿಸಿದ 112 ಪೊಲೀಸರು ಪರಿಶೀಲನೆ ನಡೆಸಿದರು. ಜನರಲ್ ಮ್ಯಾನೇಜರ್ ವಿಕಾಸ್ ಜೈಕರ್ ಬಳಕೆ ಮಾಡುತ್ತಿದ್ದ ಬೇರೆ ಕಾರನ್ನು ಪೊಲೀಸರು ವಶಕ್ಕೆ ಪಡೆದರು.