ವಿಜಯಪುರ : ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಸಂಸ್ಥಾನ ಹಿರೇಮಠದ ಜಾತ್ರೆ ಹಿನ್ನಲೆ. ವಿಜಯಪುರಕ್ಕೆ ಬಿಜೆಪಿ ರಾಜಾಧ್ಯಕ್ಷ ಬಿ.ವೈ ವಿಜಯೇಂದ್ರ‌ ಆಗಮಿಸಿದ್ರು. ಮಾಧ್ಯಮದರ ಜೊತೆ ಮಾತನಾಡಿದ ವಿಜಯೇಂದ್ರ ಅವರು ವಿಜಯಪುರ ಬಗ್ಗೆ ನನಗೆ ಹಾಗೂ ಯಡಿಯೂರಪ್ಪನವರಿಗೆ ವಿಶೇಷ ಪ್ರೀತಿ ಇದೆ.
ರಾಜ್ಯದಲ್ಲಿ ನೂರು ರಾಮಮಂದಿರ ಪುನಶ್ಚೇಚೇತನ ಮಾಡಲು ಸರ್ಕಾರ ತೀರ್ಮಾನ ಮಾಡುತ್ತಿರುವ ವಿಚಾರ
ಇದನ್ನು ಸ್ವಾಗತಿಸುತ್ತೇನೆ. ರಾಮನ ಅತ್ಯುತ್ತಮವನ್ನು ಪ್ರಶ್ನೆ ಮಾಡುತ್ತಿರುವ ಕಾಂಗ್ರೆಸ್ ರಾಮಮಂದಿರ ಪುನಶ್ಚೇತನಕ್ಕೆ ಮುಂದಾಗಿರುವುದು ಸ್ವಾಗತರ್ಹ. ಒಳ್ಳೆಯ ಕೆಲಸ ಮಾಡುತ್ತಿರುವವರಿಗೆ ನಾವು ಹಾರೈಸುತ್ತೇವೆ. ಭಗವಾನ್ ರಾಮನನ್ನ ಅವರು ಒಪ್ಪಿಕೊಂಡಿರುವುದು ತುಂಬಾ ಸಂತೋಷಕರ ಎಂದು ಹೇಳಿದರು.

ಬೆಳಗಾವಿ ಎಂ‌.ಕೆ‌ ಹುಬ್ಭಳ್ಳಿಯಲ್ಲಿ ಭಗವಾ ಧ್ವಜ ಗಲಾಟೆ ವಿಚಾರವಾಗಿ ಮಾತನಾಡಿದ ಅವರು, ಮಂಡ್ಯದಲ್ಲಿ ಭಗವಾ ಧ್ವಜ ಗಲಾಟೆ ವಿಚಾರ ಕಾಂಗ್ರೆಸ್ ಸರ್ಕಾರದ ಪಿತೂರಿಯಾಗಿತ್ತು.ಹನುಮ ಧ್ವಜ ಹಾರಿಸಲು ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದು ಧ್ವಜ ಸ್ತಂಭ ನಿರ್ಮಾಣ ಮಾಡಲಾಗಿತ್ತು. ಈ ಘಟನೆ ನಾವು ಭಾರತದಲ್ಲಿದ್ದೇವಾ ಅಥವಾ ಬೇರೆ ದೇಶದಲ್ಲಿದ್ದೇವೆ ಎಂಬ ಅನುಮಾನ ಉಂಟು ಮಾಡಿದೆ.ಅಲ್ಪಸಂಖ್ಯಾತ ಓಲೈಕೆ ಕಾರಣದಿಂದ ಅಮ್ಮ ಅನ್ನುವ ಧ್ವಜ ಹಾರಿಸಲು ಅವರು ಪ್ರಶ್ನೆ ಮಾಡುತ್ತಾರೆ. ಕಾಂಗ್ರೆಸ್ ನವರಿಗೆ ಅಧಿಕಾರ ಮತದಿಂದ ಹೀಗೆ ಮಾಡಿದ್ದಾರೆ ಎಂದರು.

ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಧಾನ ಮಾಡುವ ವಿಚಾರವಾಗಿ ಮಾತನಾಡಿದ್ದು, ಹಿಂದಿನಿಂದಲೂ ಈ ಕುರಿತು ಚರ್ಚೆ ನಡೆಯುತ್ತದೆ ಎಲ್ಲದಕ್ಕೂ ಸಮಯ ಕೂಡಿ ಬರಬೇಕು. ಮುಂಬರುವ ದಿನಗಳಲ್ಲಿ ಒಳ್ಳೆಯದಾಗುತ್ತದೆ ಎಂದು ಹೇಳಿದರು.

ನಾನು ಹಾಗೂ ಪ್ರೀತಂಗೌಡ ರಾಜಕೀಯ ಷಡ್ಯಂತ್ರಗಳಿಗೆ ಪಿತೂರಿಗೆ ಬಲಿಯಾದೆವು ಎಂಬ ಸಿಟಿ ರವಿ ಹೇಳಿಕೆ ವಿಚಾರಕ್ಕೆ ಪ್ರಶ್ನೆಗೆ ಉತ್ತರಿಸದೆ ವಿಜಯೇಂದ್ರ ಮೌನ ಮುರಿದಿದ್ದಾರೆ. ಇನ್ನೂ ಎಐಸಿಸಿ ಅಧ್ಯಕ್ಷ ಖರ್ಗೆ ಬಿಜೆಪಿ ಸೇರ್ಪಡೆಯಾಗುತ್ತಾರೆಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇಡೀ ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಉಂಟಾಗಿದೆ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪಿಎಂ ಆಗಬೇಕೆಂಬ ಮತದಾರರ ಆಶಯ. ಇದು ಎಲ್ಲೆಡೆ ವ್ಯಕ್ತವಾಗುತ್ತಿದೆ. ಮೊನ್ನೆ ಖರ್ಗೆ ಅವರ ಬಯಲು ಕೂಡ ಬಿಜೆಪಿ 400ಕ್ಕೂ ಅಧಿಕ ಸ್ಥಾನ ಬರುತ್ತವೆ ಎಂಬ ಮಾತು ಬಂದಿದೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆಂಬ ಮಾತು ಖರ್ಗೆ ಅವರ ಬಾಯಿಂದ ಬಂದಿದೆ. ಸತ್ಯದ ಇದು ಎಲ್ಲರಿಗೂ ಆಗಿದೆ. ಅದೇ ರೀತಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರಿಗೂ ಆಗಿದೆ. ಲಕ್ಷ್ಮಣ ಸವದಿ ಬಿಜೆಪಿ ಸೇರ್ಪಡೆ ವಿಚಾರ ಅದಕ್ಕೆ ನೀವೇ ಉತ್ತರಿಸಬೇಕೆಂದು ವಿಜಯೇಂದ್ರ ಹೇಳಿಕೆ ನೀಡಿದ್ರು.

 

By admin

Leave a Reply

Your email address will not be published. Required fields are marked *

Verified by MonsterInsights