Tuesday, March 3, 2026
27.3 C
Bengaluru
Google search engine
LIVE
ಮನೆಜಿಲ್ಲೆಹುಟ್ಟು ಹಬ್ಬದಂದು ತಲ್ವಾರ್​ನಿಂದ ಕೇಕ್ ಕತ್ತರಿಸಿದ ಯುವಕ

ಹುಟ್ಟು ಹಬ್ಬದಂದು ತಲ್ವಾರ್​ನಿಂದ ಕೇಕ್ ಕತ್ತರಿಸಿದ ಯುವಕ

ವಿಜಯಪುರ: ಹುಟ್ಟು ಹಬ್ಬಕ್ಕೆ ತಲ್ವಾರ್ ನಿಂದ ಕೇಕ್ ಕತ್ತರಿಸಿದ ಘಟನೆ ವಿಜಯಪುರ ‌ನಗರದ ಪೇಟಿ ಬಾವಡಿಯಲ್ಲಿ ನಡೆದಿದೆ. ಅಮನ್ ಲೋಣಿ ಎಂಬಾತ ತಲ್ವಾರ್ ನಿಂದ ಕೇಕ್ ಕತ್ತರಿಸಿದ್ದಾನೆ. ಕ್ಯಾಮರಾದಲ್ಲಿ ಸೆರೆಯಾದ ಹುಟ್ಟು ಹಬ್ಬ ಸಂಭ್ರಮದ ದೃಶ್ಯ ಇದೀಗ ವೈರಲ್ ಆಗಿದೆ.

ಅಮನ್ ಲೋಣಿಗೆ ರೌಡಿ ಶೀಟರ್​ ಸಾಥ್ ನೀಡಿದ್ದು, ಅವರೊಂದಿಗೆ ಯುವಕ ತಲ್ವಾರ್ ನಿಂದ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾನೆ. ಮಹ್ಮದ್ ಸಾಜೀದ್ ಇನಾಮದಾರ್ ಎಂಬ ರೌಡಿ ಶೀಟರ್ ಆತನ ಹುಟ್ಟು ಹಬ್ಬದಲ್ಲಿ ಭಾಗಿಯಾಗಿದ್ದನು.

ಸದ್ಯ ವಿಡಿಯೋ ವೈರಲ್​ ಆದ ಬೆನ್ನಲ್ಲೇ ತಲ್ವಾರ್ ನಿಂದ ಕೇಕ್ ಕತ್ತರಿಸಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರ ತಿಳಿದ ಗೋಲಗುಂಬಜ್ ಠಾಣೆ ಪೊಲೀಸರು ಅಮನ್ ಲೋಣಿ ಹಾಗೂ ರೌಡಿ ಶೀಟರ್​ನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಬಳಿಕ ಅವರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಿದ್ದಾರೆ. ಗೋಲಗುಂಬಜ್ ಪೊಲೀಸ್ ಠಾಣಾ‌ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments