ವಿಜಯಪುರ : ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಸದಾಶಿವ ಮುತ್ಯಾನ ಮಠದ ಸ್ವಾಮೀಜಿ 2024ರ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ. ಹೊಳೆಬಬಲಾದಿ ಮಠಾಧೀಶರು ಮತ್ತು ಕಾರ್ಣಿಕರಾದ ಸಿದ್ಧರಾಮಯ್ಯ ಹೊಳಿಮಠ ಗುರುಗಳು ಭವಿಷ್ಯ ನುಡಿದಿದ್ದು, ಈ ವರ್ಷದ ಫಲಾಫಲಗಳನ್ನು ನುಡಿಗಳನ್ನು ತೆರೆದಿಟ್ಟಿದ್ದಾರೆ.
ಉತ್ತರಕ್ಕೆ ಬರ ಹಾಗೂ ಕೆಡುಕಿದೆ. ದೊಡ್ಡ ದೊಡ್ಡ ಮಹಾಜನರ ಯೋಗ ಅಳಿಯುವುದು. ಕುಲ, ಜಾತಿಗಳಲ್ಲಿ ಕಲಹ ಜಾಸ್ತಿ ಆಗುತ್ತದೆ. ಮಳೆ, ಬೆಳೆ, ಫಲ ಕೆಂಡಮಂಡಲ ಆಗುತ್ತದೆ. ವ್ಯಾಪಾರಸ್ಥರಿಗೆ ಮಧ್ಯಮ ಫಲ ಇದೆ.
ರಾಜಕೀಯದಲ್ಲಿ ಉತ್ತಮ ವ್ಯಕ್ತಿಗೆ ಗೆಲುವು ಆಗುತ್ತದೆ. ಆದರೆ ಗಡಿ ಕಾಯುವ ಯೋಧರಿಗೆ ನೋವು ಇದೆ. ಕಣ್ಣಿನ ಕಾಯಿಲೆಗಳು ಜಾಸ್ತಿ ಆಗುತ್ತದೆ. ಜ್ಯೇಷ್ಠ ಮಾಸದಲ್ಲಿ ಲಿಂಗ, ಸಮಾನತೆ ಎಲ್ಲರೂ ಒಂದೇ ಎನ್ನುವ ಕಾಲ ಬರುತ್ತದೆ ಎಂದು ಭವಿಷ್ಯ ನುಡಿಯಲಾಗಿದೆ. ಅಲ್ಲಲ್ಲಿ ರಾಜಕೀಯ ಗೊಂದಲಗಳು ಉಂಟಾಗುತ್ತವೆ. ಧರ್ಮ ಧರ್ಮದ ನಡುವೆ ಕಿತ್ತಾಟ ಜಾಸ್ತಿ ಆಗುತ್ತದೆ. ಉತ್ತಮ ಅರ್ಹ ವ್ಯಕ್ತಿಯ ಮರ್ಧನ ಆಗುತ್ತೆ ಎಂದು ಭವಿಷ್ಯ ನುಡಿಯಲಾಗಿದೆ.