Wednesday, April 30, 2025
35.6 C
Bengaluru
LIVE
ಮನೆUncategorized110 ವರ್ಷ ಬದುಕಿ ಬಾಳಿದ ಶತಾಯುಷಿ ಭಾಗವ್ವ ಅಜ್ಜಿ ಇನ್ನಿಲ್ಲ..!

110 ವರ್ಷ ಬದುಕಿ ಬಾಳಿದ ಶತಾಯುಷಿ ಭಾಗವ್ವ ಅಜ್ಜಿ ಇನ್ನಿಲ್ಲ..!

ವಿಜಯಪುರ : ಸಧ್ಯ ಇರುವ ಜೀವನ ಶೈಲಿಗೆ ನಾವೆಲ್ಲ 60 ವರ್ಷ ಬದುಕಿದ್ರೆ ಹೆಚ್ಚು ಎನ್ನುವ ಪರಿಸ್ಥಿತಿ ಇದೆ. ರಸಾಯನಿಕ ಮಿಶ್ರಿತ ಪದಾರ್ಥಗಳ ಆಹಾರ, ಬದಲಾಗಿರುವ ಜೀವನ ಪದ್ದತಿಗಳು ಮಾನವನ ಜೀವಿತಾವಧಿಯನ್ನ ಕಡಿತ ಮಾಡಿದೆ. ಆದ್ರೆ ವಿಜಯಪುರ ಜಿಲ್ಲೆಯಲ್ಲಿ ಅಜ್ಜಿಯೊಬ್ಬಳು ಬರೊಬ್ಬರಿ 110 ವರ್ಷಗಳ ಕಾಲ ಜೀವಿಸಿ ಇಂದು ತನ್ನ ಪಯಣ ಅಂತ್ಯಗೊಳಿಸಿದ್ದಾರೆ.

ವಿಜಯಪುರ ನಗರ ಇಬ್ರಾಹಿಂಪುರ ನಿವಾಸಿ ಭಾಗವ್ವ ಕೋಲ್ಹಾರ ಶತಾಯುಷಿ ಅಜ್ಜಿ ಇಂದು ತನ್ನ ಬದುಕಿನ ಪಯಣ ಮುಗಿಸಿದ್ದಾಳೆ. ಬರೊಬ್ಬರಿ 110 ವರ್ಷಗಳ ಕಾಲ ಬದುಕಿದ್ದ ಭಾಗವ್ವ ಅಜ್ಜಿ ವಯೋಸಹಜ ಕಾಯಿಲೆಗೆ ತುತ್ತಾಗಿ ಗುರುವಾರ ಕೊನೆಯುಸಿರೆಳೆದಿದ್ದಾಳೆ. ಅಜ್ಜಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಇಬ್ರಾಹಿಂಪುರ ಏರಿಯಾದ ಜನರು ಕಂಬನಿ ಮಿಡಿದಿದ್ದಾರೆ. ಶತಮಾನದ ವರೆಗು ಬದುಕಿ ಕಣ್ಮರೆಯಾದ ಅಜ್ಜಿಯನ್ನ ನೆನೆದು ಕಣ್ಣೀರು ಹಾಕಿದ್ದಾರೆ.

ಶತಾಯುಷಿ ಭಾಗವ್ವ ಅಜ್ಜಿ ಸ್ವಾತಂತ್ರ್ಯ ಪೂರ್ವ ಅಂದರೆ 1913 ಜನೇವರಿ 1 ರಂದು ಜನಿಸಿ ಸ್ವಾತಂತ್ರ್ಯ ಹೋರಾಟದ ತೀವ್ರತೆ, ಹೋರಾಟದ ಸಂದರ್ಭಗಳನ್ನ ಕಣ್ಣಾರೆ ಕಂಡಾಕೆ. ತನ್ನ ಮಕ್ಕಳು, ಮೊಮ್ಮಕ್ಕಳಿಗು ಬ್ರೀಟಿಷರ ಆಡಳಿತ, ಸ್ವಾತಂತ್ರ್ಯಕ್ಕಾಗಿ ನಡೆದ ಸಂಗ್ರಾಮದ ಬಗ್ಗೆ ಹೇಳುತ್ತಿದ್ದಳು ಅನ್ನೋದೆ ವಿಶೇಷ..

ಶತಾಯುಷಿ ಭಾಗವ್ವಜ್ಜಿಗೆ 47 ಜನ ಮರಿ ಮೊಮ್ಮಕ್ಕಳು

ಭಾಗವ್ವ ಅಜ್ಜಿಯ ಪರಿವಾರ ಬಹಳ ದೊಡ್ಡು. ಭಾಗವ್ವ ಅಜ್ಜಿಗೆ ಬರೊಬ್ಬರಿ 12 ಮಕ್ಕಳಿದ್ದರು. ಈ 12 ಮಕ್ಕಳಲ್ಲಿ 7 ಜನ ಗಂಡು ಮಕ್ಕಳು, 5 ಜನ ಹೆಣ್ಣು ಮಕ್ಕಳಿದ್ದಾರೆ. 30ಜನ ಮೊಮ್ಮಕ್ಕಳಿದ್ದಾರೆ. 17 ಜನ ಮರಿ ಮೊಮ್ಮಕ್ಕಳಿದ್ದಾರೆ. ಅಜ್ಜಿ ಸಾವಿನಿಂದಾಗಿ ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳಲ್ಲಿ ದುಃಖ ಮಡುಗಟ್ಟಿದೆ..

ಕೊನೆಯ ದಿನದವರೆಗೂ ಉರುಗೋಲು ಹಿಡಿದ ಭಾಗವ್ವ ಅಜ್ಜಿ

ಭಾಗವ್ವ ಅಜ್ಜಿಗೆ ವಯಸ್ಸು 110 ವಯಸ್ಸಾದ್ರು ಉರುಗೋಲನ್ನ ಮುಟ್ಟಿಲ್ಲ ಅನ್ನೋದು ಮತ್ತೊಂದು ಅಚ್ಚರಿಯ ವಿಚಾರ. ಈಗೆಲ್ಲ 60 ವರ್ಷ ದಾಟುತ್ತಿದ್ದಂತೆ ಕೈಯಲ್ಲಿ ಆಧಾರಕ್ಕಾಗಿ ಬಡಿಗೆ ಹಿಡಿಯೋರೆ ಜಾಸ್ತಿ. ಆದ್ರೆ ಭಾಗವ್ವ ಅಜ್ಜಿ 110 ವಯಸ್ಸಿನಲ್ಲು ಅದೇಷ್ಟು ಸದೃಢಳಾಗಿದ್ದಳು ಎಂದರೆ ಒಂದೆ ಒಂದು ದಿನವು ಕೋಲನ್ನ ಮುಟ್ಟಲಿಲ್ಲ. ಬಡಿಗೆಯನ್ನ ಆಧಾರವಾಗಿ ಹಿಡಿದುಕೊಂಡಿಲ್ಲವಂತೆ. ಈ ವಿಚಾರ ತಮಗು ಅಚ್ಚರಿ ತರಿಸಿದೆ ಎಂದು ಅಜ್ಜಿ ಮೊಮ್ಮಗ ಮಂಜುನಾಥ ಕೋಲಾರ ಮಾಹಿತಿ ಹಂಚಿಕೊಂಡಿದ್ದಾರೆ..

ಅಜ್ಜಿಯ ಅಂತಿಮಯಾತ್ರೆಯಲ್ಲಿ ಚಿನ್ನದ ಹೂವು ಹಾರಿಸಿದ ಮರಿ ಮೊಮ್ಮಕ್ಕಳು..

ಉತ್ತರ ಕರ್ನಾಟಕ ಹಾಗೂ ಹಿಂದೂ ಸಂಪ್ರದಾಯದಲ್ಲಿ ಹಿರಿಯರು ಜೀವಿತಾವಧಿಯಲ್ಲಿ ಮೊಮ್ಮಕ್ಕಳಿಂದ ಮಕ್ಕಳನ್ನ ಅಂದ್ರೆ ಮರಿ ಮೊಮ್ಮಕ್ಕಳನ್ನ ಕಂಡರೆ ಅಂತ ಹಿರಿಯರು ಸಾವನ್ನಪ್ಪಿದಾಗ ಪಾರ್ಥಿವ ಶರೀರದ ಮೇಲೆ ಚಿನ್ನದ ಹೂವು ಹಾರಿಸುವ ಸಂಪ್ರದಾಯವಿದೆ. ಹಾಗೇ ಭಾಗವ್ವ ಅಜ್ಜಿ ಮರಿ ಮೊಮ್ಮಕ್ಕಳನ್ನ ಕಂಡಿದ್ದು ಅಜ್ಜಿಯ ಅಂತಿಮಯಾತ್ರೆಯಲ್ಲಿ ಮರಿ ಮೊಮ್ಮಕ್ಕಳು 5ಗ್ರಾಂ ಬಂಗಾರದ ಹೂವುಗಳನ್ನ ಹಾರಿಸಿ ಅಜ್ಜಿಗೆ ಬೀಳ್ಕೊಟ್ಟಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments