ವಿಜಯನಗರ : ಸಂಸದ ಜಗ್ಗೇಶ್ ನೇತೃತ್ವದಲ್ಲಿ ಮತ್ತೊಮ್ಮೆ ಮೋದಿಗಾಗಿ ಹಂಪಿಯಲ್ಲಿ ವಿಶೇಷವಾಗಿ ಯಂತ್ರೋದ್ಧಾರಕ, ವಿರೂಪಾಕ್ಷ, ಭುವನೇಶ್ವರಿ ದೇಗುಲದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿ ಆಗಬೇಕು ಎಂದು ವಿಶೇಷವಾಗಿ ಪೂಜೆಯನ್ನ ಮಾಡಿಸಿದ್ದಾರೆ.
ದೇಶಕ್ಕೆ ಸುಭಿಕ್ಷೆ ಆಗಲಿ, ಬರಗಾಲದಿಂದ ದೂರ ಆಗಲಿ ಅಂತ ಸಂಕಲ್ಪ ಮಾಡಿ ಪೂಜೆ ಸಲ್ಲಿಸಿದರು. ತೆಪ್ಪದಲ್ಲಿ ನವಬೃಂದಾವಣಕ್ಕೆ ತೆರಳಿ ಮೋದಿ ಪ್ರಧಾನಿ ಆಗಬೇಕು ಅಂತ ಪ್ರಾರ್ಥನೆಯನ್ನು ಮಾಡಿ ಕನ್ನಡಾಂಬೆ ನೋಡಿ ಮಹಾದಾನಂದ ಆಯ್ತೆಂದು ಉದ್ಘರಿಸಿದರು.
ಹಂಪಿಗೆ ಇದುವರೆಗೂ ಗೌಪ್ಯವಾಗಿ ಬಂದು ಹೋಗುತ್ತಿದ್ದೆ. ನನ್ನ ಜನ್ಮ ದಿನವನ್ನ ಮಂತ್ರಾಲಯ ರಾಯರ ಮಠದಲ್ಲಿ ಆಚರಿಸಿಕೊಂಡೆ. ಕ್ಷಾತ್ರ ಮಾಸದಲ್ಲಿ ಹಂಪಿ ವಿರೂಪಾಕ್ಷ ಸನ್ನಿಧಿಯಲ್ಲಿ ಪೂಜಿಸುವ ಅವಕಾಶ ಸಿಕ್ಕಿದೆ. ಮೋದಿಗಾಗಿ ಬಹಿರಂಗ ಕಾಣಿಸಿಕೊಂಡು ಪೂಜೆ ಸಲ್ಲಿಕೆ ಮಾಡಿದ್ದೇನೆ. ಹಂಪಿ ವಿರೂಪಾಕ್ಷನಿಗೆ ಪೂಜೆ ಸಲ್ಲಿಸಿದ್ದು ತುಂಬಾ ಖುಷಿ ಆಗಿದೆ ಎಂದು ನಟ ಜಗ್ಗೇಶ್ ಸಂತೋಷವನ್ನ ವ್ಯಕ್ತಪಡಿಸಿದ್ದಾರೆ.