Wednesday, January 28, 2026
23.8 C
Bengaluru
Google search engine
LIVE
ಮನೆರಾಜ್ಯಆಸ್ಪತ್ರೆಯ ಬಳಿ ಸ್ವಚ್ಛಗೊಳಿಸುವ ಮೂಲಕ ಜಾಗೃತಿ ಮೂಡಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರು

ಆಸ್ಪತ್ರೆಯ ಬಳಿ ಸ್ವಚ್ಛಗೊಳಿಸುವ ಮೂಲಕ ಜಾಗೃತಿ ಮೂಡಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರು

ವಿಜಯನಗರ : ರಾಷ್ಟ್ರೀಯ ಸ್ವಚ್ಚತಾ ದಿವಸ್ ನಿಮಿತ್ತ, ವಿಜಯನಗರ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಮತ್ತು ತಾಲೂಕು ಕಾನೂನು ಸೇವಾ ಸಮಿತಿ, ಹೊಸಪೇಟೆ ವಕೀಲರ ಸಂಘದ ಆಶ್ರಯದಲ್ಲಿ ಹೊಸಪೇಟೆಯ 100 ಹಾಸಿಗೆ ಆಸ್ಪತ್ರೆಯ ಬಳಿ ಸ್ವಚ್ಚತಾ ಕಾರ್ಯಕ್ರಮ ಮಾಡಲಾಯಿತು.


ಹೊಸಪೇಟೆಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು, ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಹೇಮಲತಾ ಹುಲ್ಲೂರು, ಅಪರ ಹಿರಿಯ ಸಿವಿಲ್ ನ್ಯಾಯಾಧೀಶರು ರಮೇಶ್ ಬಾಬು, ಮೂರನೇ ಅಪರ ಸಿವಿಲ್ ನ್ಯಾಯಾಧೀಶರು ಚೈತ್ರಾ ಜೆ ಸ್ವಚ್ಛಗೊಳಿಸುವ ಮೂಲಕ ಜಾಗೃತಿ ಮೂಡಿಸಿದರು.

ಟಿಎಚ್ಓ ಡಾ. ಭಾಸ್ಕರ್, ಹೊಸಪೇಟೆಯ 100 ಹಾಸಿಗೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ, ಡಾ. ಸಲಿಂ, ವೈದ್ಯರಾದ ಡಾ. ಮಾಹಂತಪ್ಪ, ಡಾ. ಗಂಗಾಧರ್ ಮೇಟಿ, ಫಜಲುದ್ದೀನ್, ಸೇರಿದಂತೆ ನಜಬುನ್ನಿಸಾ, ವಾಣಿ ಶ್ರೀ, ನರ್ಸ್ ಸರಸ್ವತಿ, ನಾಗರಾಜ್, ಡಿ ಗ್ರೂಪ್ ನ ಅಜಯ್ ತಂಡ ಇದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments