ವಿಜಯನಗರ: ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲಾ ಆಡಳಿತ ಚುರುಕಾಗಿದೆ. ಸರ್ಕಾರಿ ಜಾಹಿರಾತಿನ ಬ್ಯಾನರ್ಗಳ ತೆರವು ಶುರು ಮಾಡಿದೆ. ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ ಕಚೇರಿ ಆವರಣ ಸೇರಿ ಹಲವೆಡೆ ಅಳವಡಿಸಿದ್ದ ಬ್ಯಾನರ್ ತೆರವು ಮಾಡಲಾಗಿದೆ.
ನಗರಸಭೆ ಸಿಬ್ಬಂಧಿ ಜಾಹಿರಾತ ಬೋರ್ಡ ತಯ್ಯಾರಿಯಲ್ಲಿ ನಿರತವಾಗಿದೆ. ಸಿಎಂ. ಡಿ.ಸಿಂ ಹಾಗೂ ಇಲಾಖೆಯ ಸಚಿವರುಗಳ ಫೋಟೋ ಇದ್ದ ಬ್ಯಾನರ್ಗಳ ತೆರವು ಮಾಡುತ್ತಿದೆ. ಇದರೊಂದಿಗೆ ಸರ್ಕಾರದಿಂದ ಜನಪ್ರತಿನಿಧಿಗಳಿಗೆ ನೀಡಲಾಗಿದ್ದ ಸರ್ಕಾರಿ ವಾಹನಗಳನ್ನು ಜಿಲ್ಲಾಡಳಿತ ಅಧಿಕಾರಿಗಳು ವಾಪಸ್ ಪಡೆದಿದ್ದಾರೆ.