ವಿಜಯನಗರ: ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಚದಲ್ಲಿ ಬಂಡಾಯದ ಬಿಸಿವುಂಟಾಗಿದೆ. ಹೊಸಪೇಟೆ ಕಾಂಗ್ರೆಸ್ ಮುಖಂಡ ಗುಜ್ಜಲ್ ನಾಗರಾಜ್ ಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ ಹೊಸಪೇಟೆಯ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯಲ್ಲಿ ಕೂತು ಪ್ರತಿಭಟನೆ ನಡೆಸಿದರು.
ತಹಶಿಲ್ದಾರ್ ಕಚೇರಿ ಮುಂಭಾಗದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಿದ್ರು. ಬಳ್ಳಾರಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಈಗಾಗಲೇ ಸಂಡೂರು ಶಾಸಕ ತುಕಾರಾಂಗೆ ಟಿಕೆಟ್ ಫೈನಲ್ ಆಗಿದೆ. ಕಾಂಗ್ರೆಸ್ ಪಕ್ಷಕ್ಕಾಗಿ ಗುಜ್ಜಲ್ ನಾಗರಾಜ್ ದುಡಿದಿದ್ದು, ನೂರಾರು ಕಾರ್ಯಕರ್ತರನ್ನು ಬೆಳೆಸಿದ್ದಾರೆ. ಪಶ್ಚಿಮ ತಾಲೂಕುಗಳಿಗೆ ಇದುವರೆಗೆ ಟಿಕೆಟ್ ಕೊಟ್ಟಿಲ್ಲಾ ಈ ಭಾಗದ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು ಎಂದು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಪೊಲೀಸರು- ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಯಿತು. ರಸ್ತೆ ತಡೆ ಮಾಡೋ ಹಾಗಿಲ್ಲ ಅಂತ ಪೊಲೀಸರ ವಾರ್ನಿಂಗ್ ನೀಡಿದರು. ರಸ್ತೆ ತಡೆ ಮಾಡುತ್ತಿದ್ದ ಕಾರ್ಯಕರ್ತರನ್ನು ಫುಟ್ ಪಾತ್ ಕಡೆ ಪೋಲೀಸರು ಕರೆದುಕೊಂಡು ಹೋದ ಪ್ರಸಂಗ ನಡೆಯಿತು.