ವಿಜಯನಗರ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅನುಮತಿ ಪಡೆದವರು ಶಸ್ತ್ರಾಸ್ತ್ರ, ಮದ್ದು – ಗುಂಡಿನೊಂದಿಗೆ ತಿರುಗಾಡುವಂತಿಲ್ಲ ವಿಜಯನಗರ ಜಿಲ್ಲಾಧಿಕಾರಿ ದಿವಾಕರ್ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಲೋಕಸಭಾ ಎಲೆಕ್ಷನ್ ದಿನಾಂಕದಿಂದ ನೀತಿ ಸಂಹಿತೆ ಮುಕ್ತಾಯದವರೆಗೆ ಜಿಲ್ಲೆಯಲ್ಲಿ ಪರವಾನಗಿ ಹೊಂದಿದ ಗನ್ ದಾರರು ಹತ್ತಿರದ ಠಾಣೆಗಳಲ್ಲಿ ಠೇವಣಿ ಇಡಬೇಕು ಎಂದು ಹೇಳಿದರು.
ಲೈಸೆನ್ಸ್ ಹೋಲ್ಡರ್ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡಬೇಕು. ಅನುಮತಿ ಪಡೆದ ಶಸ್ತ್ರಾಸ್ತ್ರ ತಯಾರಕರು ನೀತಿ ಸಂಹಿತೆ ಮುಗಿಯೋವರೆಗೂ ಯಾವುದೇ ಚಟುವಟಿಕೆ ಮಾಡುವಂತಿಲ್ಲ. ಪ್ರತಿದಿನ ಮಾರಾಟ – ದಾಸ್ತಾನು ವ್ಯವಹಾರಗಳ ವಿವರ ಡಿಸಿ ಕಚೇರಿಗೆ ಸಲ್ಲಿಸಬೇಕು. ಆದೇಶಕ್ಕೆ ಸಂಬಂಧಿಸಿದವರು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿಜಯನಗರದ ಜಿಲ್ಲಾಧಿಕಾರಿ ಕಠಿಣವಾದಂತಹ ಆದೇಶವನ್ನು ಹೊರಡಿಸಿದ್ದಾರೆ.