ಆನೇಕಲ್ : ತಮಿಳುನಾಡಿನ ಡೆಂಕಣಿಕೋಟೆ ಕಾಡಂಚಿನಲ್ಲಿ ಸಂಚರಿಸಿದ ಒಂಟಿ ಸಲಗದ ದಾಳಿಗೆ ಇಬ್ಬರು ಮಹಿಳೆಯರು ಸೇರಿ ಎರಡು ಹಸುಗಳು ಬಲಿಯಾಗಿವೆ. ಸಹಜವಾಗಿ ಪರಿಚಿತ ಕಾಡಾನೆ ನಾಡಿಗೆ ಬರುತ್ತಿದ್ದು ಮೊನ್ನೆಯಿಂದ ಒಂಟಿ ಆನೆಯೊಂದು ಡೆಂಕಣಿಕೋಟೆ ಸುತ್ತ ರಾತ್ರಿ ವೇಳೆ ಸಂಚರಿಸುತಿತ್ತು. ಮೊನ್ನೆ ಡೆಂಕಣಿಕೋಟೆ ಸರ್ಕಾರಿ ಶಾಲೆಗೆ ಭೇಟಿ ನೀಡಿ ಹೊರ ಹೋಗಿದ್ದ ಸಲಗವೇ ಇದು ಎನ್ನುವುದು ಸಹಜವಾಗಿ ಅರಣ್ಯಾಧಿಕಾರಿಗಳ ವಾದವಾಗಿದೆ.
ತಳಿ ದಾಸರಹಳ್ಳಿಯ ವಸಂತಮ್ಮ(37) ಅನ್ನಿಯಾಳಮ್ಮ(45) ಸಾವನ್ನಪ್ಪಿದ ಮಹಿಳೆಯರಾಗಿದ್ದಾರೆ.
ಬೆಳಗ್ಗೆ ಸಹಜವಾಗಿ ದನಗಳು ಕಾಡಬಳಿ ಸುಳಿದಾಗ ಏಕಾಏಕಿ ಟಸ್ಕರ್ ದಾಳಿಗರ ಒಳಗಾಗಿವೆ ಹಾಗೆಯೇ ಹತ್ತಿರವಿದ್ದ ಮಹಿಳೆಯರ ಮೇಲೆ ಮುಗಿ ಬಿದ್ದಿತ್ತು ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಾಮಾನ್ಯವಾಗಿ ನಾಡಿನೊಳಗೆ ವಾಡಿಕೆಯಂತೆ ಕಾಣಬರುವ ಒಂಟಿ ಸಲಗ ಇದಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸುತ್ತಾರೆ. ಹೊಸ ಸಲಗ ಇದು ಎಂದು ಗುರುತಿಸಿದ್ದು, ಅದರ ಬೆನ್ನ ಹತ್ತುವಲ್ಲಿ ಮುಂದಾಗಿದ್ದಾರೆ.
ಸಾವನ್ನಪ್ಪಿದವರ ಕುಟುಂಬದವರು ರಸ್ತೆ ತಡೆದು ನ್ಯಾಯ ಕೊಡಿಸುವಂತೆ ಅರಣ್ಯಾಧಿಕಾರಿಗಳ ವಿರುದ್ದ ಪ್ರತಿಭಟನೆಗಿಳಿದಿದ್ದಾರೆ. ಇನ್ನು ಗ್ರಾಮಸ್ಥರು ಮನೆ ಬಿಟ್ಟು ಹೊರ ಬಾರದಂತೆ ಅರಣ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.