ತುಮಕೂರು : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯಲ್ಲಿ ಮತ್ತೆ ಬಹಿರಂಗ ಕಿತ್ತಾಟ ಶುರುವಾಗಿದೆ. ಮಾಜಿ ಸಚಿವ ಮಾಧುಸ್ವಾಮಿ ವಿರುದ್ದ ಸಂಸದ ಜಿ.ಎಸ್.ಬಸವರಾಜ ಅಸಮಾಧಾನ ಹೊರ ಹಾಕಿದ್ದಾರೆ. ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿಗೆ ಟಿಕೆಟ್ ಕೊಟ್ಟರೆ ನಾನು ಸೋಲಿಸುತ್ತೇನೆ. ಬೇರೆ ಯಾವುದೇ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇನೆ. ಇದು ನನ್ನ ಖಚಿತವಾದ ನಿಲುವು ಎಂದು ಸಂಸದ ಜಿ ಎಸ್ ಬಸವರಾಜ ತುಮಕೂರಿನಲ್ಲಿ ಹೇಳಿದರು.
ಒಬ್ಬ ಸಂಸದನಾಗಿ ನಾನು ಅವರ ಕಚೇರಿಗೆ ಹೋದರೆ ಗೌರವ ಕೊಟ್ಟಿರಲಿಲ್ಲ. ಅರ್ಧಗಂಟೆ ಕಾಯಿಸಿದ್ರು…ಅಂಥವರ ಪರ ನಾನು ಕೆಲಸ ಮಾಡಲ್ಲ. ಮಾಧುಸ್ವಾಮಿಗೆ ಟಿಕೆಟ್ ಕೊಟ್ಟರೆ ಅವರು ಗೆಲ್ತಾರಾ? ಯಾವ ಜನನೂ ಅವರಿಗೆ ಮತ ಹಾಕಲ್ಲ ಎಂದರು.
ಇನ್ನೂ.. ನಂತರ ಮಾತನಾಡಿದ ಅವರು, ಮುದ್ದಹನುಮೇಗೌಡರಿಗೆ ಕಾಂಗ್ರೆಸ್ ನಿಂದ ಟಿಕೆಟ್ ಫೈನಲ್ ಆಗಿದೆ. ಆದರೆ ಈ ಬಾರಿ ಕುಂಚಿಟಿಗರು ಯಾರೂ ಮುದ್ದಹನುಮೇಗೌಡರಿಗೆ ಮತ ಹಾಕಲ್ಲ. ಶೋಭಾ ಕರಂದ್ಲಾಜೆ ತುಮಕೂರಿಗೆ ಯಾಕೆ ಬರುತ್ತಾರೆ?. ಸದಾನಂದ ಗೌಡರ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಸಿಟಿ ರವಿ ಅವರು ಉಡುಪಿ, ಚಿಕ್ಕಮಗಳೂರು ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ. ಅಲ್ಲದೆ ವಿ.ಸೋಮಣ್ಣ ರಾಜ್ಯಸಭೆಗೆ ಸ್ಪರ್ಧೆಗೆ ಎಂದು ಜಿ.ಎಸ್ ಬಸವರಾಜು ತಿಳಿಸಿದರು.