ತುಮಕೂರು : ಡಿಸೇಲ್ ಟ್ಯಾಂಕರೊಂದು ಪಲ್ಟಿಯಾದ ಅದರಲ್ಲಿ ಡಿಸೇಲ್ ಸೋರಿಕೆಯಾದ ಕಾರಣ ಡಿಸೇಲ್ ಸಂಗ್ರಹಿಸಲು ಜನರು ಮುಗಿಬಿದ್ದಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನ ಹರಿಸಮುದ್ರಗೇಟ್ ಬಳಿ ನಡೆದಿದೆ.
ಟ್ಯಾಂಕರ್ ಲಾರಿ ಬಿದ್ದ ತಕ್ಷಣ ಡೀಸೆಲ್ ನೀರಿನಂತೆ ಹರಿಯುತ್ತಿದ್ದು, ಡೀಸೆಲ್ ತುಂಬಿಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಘಟನಾ ಸ್ಥಳದಲ್ಲಿ ರಸ್ತೆ ಪೂರ್ತಿ ಟ್ರಾಫಿಕ್ ಜಾಮ್ ಉಂಟಾಗಿದೆ. ಮುನ್ನಚ್ಚರಿಕೆಯಾಗಿ ಅಗ್ನಿಶಾಮಕ ದಳದಿಂದ ಬೆಂಕಿ ಹೊತ್ತಿಕೊಳ್ಳದಂತೆ ಕ್ರಮ ಕೈಗೊಂಡಿದ್ದಾರೆ. ಸ್ಥಳದಲ್ಲಿ ಜನತೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.