ವೈದ್ಯಕೀಯ ಇತಿಹಾಸದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಅಮೆರಿಕದ ಶಸ್ತ್ರಚಿಕಿತ್ಸಕರು 57 ವರ್ಷದ ಹೃದ್ರೋಗ ರೋಗಿಗೆ ಹಂದಿ ಹೃದಯವನ್ನು ಯಶಸ್ವಿಯಾಗಿ ಕಸಿ ಮಾಡಿದ್ದಾರೆ. ಮಾರಣಾಂತಿಕ ಹೃದ್ರೋಗ ಹೊಂದಿರುವ 57 ವರ್ಷದ ಮೇರಿಲ್ಯಾಂಡ್ ನಿವಾಸಿಗೆ ಹಂದಿ ಹೃದಯವನ್ನು ಅಳವಡಿಸಲಾಗಿದೆ.
ಡೇವಿಡ್ ಬೆನೆಟ್ ಎಂಬುವವರು ತೀವ್ರವಾದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ರು. ಅವ್ರಿಗೆ ಶಸ್ತ್ರಚಿಕಿತ್ಸೆ ಮಾಡಿ ಹಂದಿ ಹೃದಯವನ್ನು ಯಶಸ್ವಿಯಾಗಿ ಜೋಡಣೆ ಮಾಡಲಾಗಿದ್ದು, ಪ್ರಾಣಿಗಳ ಹೃದಯವು ಮನುಷ್ಯನ ದೇಹದಲ್ಲಿ ಮಾನವ ಹೃದಯದಂತೆಯೇ ಕಾರ್ಯ ನಿರ್ವಹಿಸುತ್ತದೆ ಅನ್ನೋದು ಸಾಬೀತಾಗಿದೆ.

ಇನ್ನು ಈ ಕಸಿಯಿಂದ ಜೀವ ಉಳಿಸುವ ಪ್ರಯೋಜನಳಿವೆಯೇ ಅನ್ನೋದನ್ನ ನಿರ್ಧರಿಸಲು ರೋಗಿ ಡೇವಿಡ್ ಬೆನೆಟ್ ಅವ್ರ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಕಸಿ ಮಾಡಿದ ವೈದ್ಯರ ತಂಡ ಹೇಳಿದೆ. ಇದರಿಂದಾಗಿ ಮನುಷ್ಯ ಇನ್ಮುಂದೆ ಅಂಗಾಗ ಕಸಿ ತೊಂದರೆ ಅನುಭವಿಸೋ ಅಗತ್ಯ ಇಲ್ಲ ಅನ್ನೋ ಚರ್ಚೆ ಶುರುವಾಗಿದೆ. ಇತ್ತೀಚೆಗಷ್ಟೇ ಹಂದಿಯ ಕಿಡ್ನಿಯನ್ನ ಕಸಿ ಮಾಡಿ, ಮನುಷ್ಯನಿಗೆ ಹಾಕಲಾಗಿತ್ತು. ಅದು ಕೂಡ ಸಕ್ಸಸ್ ಆಗಿತ್ತು.


