ಬೆಂಗಳೂರು : ಆರ್‌ಸಿಬಿ (RCB) ಪಂದ್ಯವನ್ನು ಸೋತಿದ್ದು ಕೋಲ್ಕತ್ತಾ ನೈಟ್ ರೈಡರ್ಸ್ (KKR) 7 ವಿಕೆಟ್‌ಗಳ ಜಯ ಸಾಧಿಸಿದೆ. ಸತತ ಎರಡು ಜಯ ಸಾಧಿಸುವ ಮೂಲಕ ಕೋಲ್ಕತ್ತಾ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ.
ಗೆಲ್ಲಲು 183 ರನ್‌ಗಳ ಗುರಿಯನ್ನು ಪಡೆದ ಕೋಲ್ಕತ್ತಾ 16.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 186 ರನ್ ಹೊಡೆದು ಜಯ ಸಾಧಿಸಿತು. ಇಲ್ಲಿಯವರೆಗೆ ತವರಿನಲ್ಲಿ ನಡೆದ ಎಲ್ಲಾ 9 ಪಂದ್ಯಗಳನ್ನು ತವರಿನ ತಂಡಗಳೇ ಜಯಗಳಿಸಿದ್ದವು. ಆದರೆ ಆರ್‌ಸಿಬಿ ತವರಿನ ಎರಡನೇ ಪಂದ್ಯದಲ್ಲಿ ಎಡವಿದೆ.