ಬೆಂಗಳೂರು : ಅಸ್ವಸ್ಥಗೊಂಡು ಐಸಿಯುನಲ್ಲಿದ್ದ ಟೀಮ್ ಇಂಡಿಯಾ ಕ್ರಿಕೆಟಿಗ, ಕರ್ನಾಟಕ ರಣಜಿ ತಂಡದ ನಾಯಕ ಮಯಾಂಕ್ ಅಗರ್ವಾಲ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಇಂದೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದು, ಸಂಜೆ ವೇಳೆಗೆ ಬೆಂಗಳೂರಿಗೆ ಬಂದಿಳಿಯಲಿದ್ದಾರೆ.
ನಿನ್ನೆ ತ್ರಿಪುರಾದಿಂದ ಸೂರತ್ಗೆ ತೆರಳುವ ವೇಳೆ ವಿಮಾನದಲ್ಲಿದ್ದ ನೀರು ಕುಡಿದ ಬಳಿಕ ಮಯಾಂಕ್ ಅಗರ್ವಾಲ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಬಾಯಿ ಹಾಗೂ ಗಂಟಲಲ್ಲಿ ಸುಟ್ಟ ಅನುಭವವಾದ ಬೆನ್ನಲ್ಲೇ, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಗರ್ತಲಾದ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದ ಮಯಾಂಕ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಯಾಂಕ್ ಪೋಸ್ಟ್ ಮಾಡಿದ್ದು, ನಾನು ಆರೋಗ್ಯವಾಗಿದ್ದಿನಿ ಎಂದು ಬರೆದುಕೊಂಡಿದ್ದಾರೆ.