Wednesday, April 30, 2025
26.6 C
Bengaluru
LIVE
ಮನೆರಾಜ್ಯಗೌರಿ ನಾಯ್ಕ ಛಲಕ್ಕೆ ಗಂಗೆ ಶರಣು

ಗೌರಿ ನಾಯ್ಕ ಛಲಕ್ಕೆ ಗಂಗೆ ಶರಣು

ಶಿರಸಿ: ಕಳೆದ 36 ದಿನಗಳಿಂದ ನಿರಂತರ ಪರಿಶ್ರಮದಿಂದ 50 ಅಡಿ ಭಾವಿ ತೋಡಿ. ಜೀವ ಗಂಗೆಯನ್ನ ಹೊರತೆಗೆದ ಸಾಹಸಿ. ಅಂಗನವಾಡಿ ಆವರಣದಲ್ಲಿ ಏಕಾಂಗಿಯಾಗಿ ಬಾವಿ ತೋಡತ್ತಿದ್ದ ಇಲ್ಲಿನ ಗಣೇಶ ನಗರದ ಮಹಿಳೆ ಗೌರಿ ನಾಯ್ಕ್‌ ನೀರು ತರುವಲ್ಲಿ ಯಶಸ್ವಿಯಾಗಿದ್ದಾರೆ.

ಸುಮಾರು 50 ಅಡಿ ಬಾವು ತೋಡಿ ಗಂಗೆಯನ್ನು ಹೊರತರುವಲ್ಲಿ ಸಫಲರಾಗಿದ್ದಾರೆ.. ಗೌರಿಯ ಈ ಸಾಧನೆಗೆ ಸ್ಥಳೀಯ ಸಾರ್ವಜನಿಕರು ತೀವ್ರ ಸಂತೋಷ ವ್ಯಕ್ತಪಡಿಸಿದ್ದಾರೆ. ಗ್ರಾಮದ ಸುತ್ತಲೂ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.ಜ.30ರಂದು ಶಿರಸಿ ಗಣೇಶ ನಗರದ ಅಂಗನವಾಡಿ ನಂಬರ್‌ 6ರಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ಕೊರತೆ ಕಂಡು ಶಾಶ್ವತ ಪರಿಹಾರ ಕಲ್ಪಿಸಲು ಗೌರಿ ನಾಯ್ಕ್‌ ಬಾವಿ ತೋಡಲು ಶ್ರೀಕಾರ ಹಾಕಿದ್ದರು.50 ಅಡಿ ಆಳ ಬಾವಿ ತೆಗೆದು ಗೌರಿಯ ಸಾಹಸವನ್ನ ಮಾಧ್ಯಮಗಳಳು ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡ್ಡಗಾಲು ಹಾಕಿ, ಬಾವಿ ಮುಚ್ಚಿಸಲಾಗಿತ್ತು. ಅದನ್ನು ಖಂಡಿಸಿ ಸ್ಥಳೀಯರು ಪ್ರತಿಭಟಿಸಿ. ಸಹಾಯಕ ಆಯುಕ್ತರ ಕಚೇರಿಗೆ ಹಾಗೂ ತಹಸೀಲ್ದಾರ್‌ ಕಚೇರಿಗೆ ಮನವಿ ಸಲ್ಲಿಸಿದರು.

ಇನ್ನುಸಂಸದ ಅನಂತ್‌ಕುಮಾರ್ ಹೆಗಡೆ ಬಾವಿ ತೆಗೆಯುತ್ತಿದ್ದ ಸ್ಥಳಕ್ಕೆ ತೆರಳಿ ಜಿಲ್ಲಾಧಧಿಕಾರಿ ಜೊತೆ ಮಾತನಾಡಿ. ತಕ್ಷಣವೇ ಗೌರಿಗೆ ಬಾವಿ ತೋಡಲು ಅವಕಾಶ ನೀಡಬೇಕು. ಅಡೆತಡೆ ಮಾಡಬಾರದು ಎಂದು ಸೂಚನೆ ನೀಡಿದ್ದರು..ನೀರು ಬಂದ ನಂತರ ಬಾವಿಗೆ ಗೌರಿ ಅಂತ ಹೆಸರಿಡುವ ಭರವಸೆ ನೀಡಿದ್ದರು. ಇದಾದ ಬಳಿಕ ಗೌರಿ ನಾಯ್ಕ್​ ಮತ್ತೆ ಬಾವಿ ತೋಡಲು ಆರಂಭಿಸಿದ್ದು, ಇದೀಗ ಗಂಗೆ ಉಕ್ಕಿದ್ದಾಳೆ.

ಎಲ್ಲಾ, ಸಮಸ್ಯೆ ಸವಾಲುಗಳ ಮಧ್ಯೆ ಅವರು ಬಾವಿ ತೋಡಿದರು.ಗೌರಿಯವರ ಏಕಾಂಗಿಯಾಗಿ ತೋಡಿದ ಮೂರನೇ ಬಾವಿ ಇದು..ಇನ್ನು ಗೌಡಿ ತೊಡಿದ ಬಾವಿಯಿಂದ ಜೀವ ಜಲ ಕಂಡಿದ್ದು ಸ್ಥಳೀಯರ ಮುಖದಲ್ಲೂ ನಗು ಕಾಣಿಸಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments