ನವದೆಹಲಿ : ರಾಯಲ್ ಚಾಲೆಂಜರ್ಸ್ ಬೆಂಗಳೂರು 17ನೇ ಆವೃತ್ತಿಯಲ್ಲಿ ಚೊಚ್ಚಲ ಟ್ರೋಫಿಯ ಕನಸಿನೊಂದಿಗೆ ಅಂಗಳಕ್ಕೆ ಇಳಿಯಲಿದೆ. ಈ ಬಾರಿಯಾದ್ರೂ ಮಾಯಾ ಜಿಂಕೆಯಂತೆ ಕಾಡುತ್ತಿರುವ ಟ್ರೋಫಿಗೆ ಮುತ್ತಿಟ್ಟು ಪ್ರಶಸ್ತಿ ಬರವನ್ನು ನೀಗಿಸಿಕೊಳ್ಳುವ ಪ್ಲಾನ್ ಆರ್‌ಸಿಬಿ ತಂಡದ್ದಾಗಿದೆ. ಈ ನಿಟ್ಟಿನಲ್ಲಿ ಆರ್‌ಸಿಬಿ ಹಲವು ಸರ್ಕಸ್ ಮಾಡುತ್ತಿದೆ.
ಇದಕ್ಕಾಗಿ ಆರ್‌ಸಿಬಿ ಈಗ ವಾಮ ಮಾರ್ಗದತ್ತ ಮುಖ ಮಾಡಿದೆ. ಆಟಗಾರರು ಆಡುವ ಕೆಲಸವನ್ನು ಮೈದಾನದಲ್ಲಿ ಅವರು ಮಾಡಲಿ ನಾವು ಅದೃಷ್ಟದ ಆಟವನ್ನು ಆಡೋಣ ಎಂಬ ಲೆಕ್ಕಾಚಾರಕ್ಕೆ ಆರ್‌ಸಿಬಿ ಮ್ಯಾನೇಜೆಂಟ್ ಇಳಿದಂತೆ ಕಾಣುತ್ತಿದೆ. ಅಸಲಿಗೆ ಸತತ 16 ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪೇಲಿಂಗ್ ಬದಲಾವಣೆಗೆ ಮುಂದಾಗಿದೆ.
ಹೀಗಾದರೂ ಕಪ್ ನಮ್ಮ ಕೈ ಸೇರಲಿ ಎಂಬ ಭಾವನೆ ಟೀಮ್ ಮ್ಯಾನೇಜೆಂಟ್‌ನದ್ದಾಗಿದೆ. ಬಣ್ಣ ಬದಲಾಗುತ್ತದಾ? ಆರ್‌ಸಿಬಿ ತಂಡದ ಜೆರ್ಸಿ ಕಲರ್ ಚೇಂಜ್ ಆಗುತ್ತದಾ ಎಂಬ ಊಹಾಪೋಹಗಳು ಈಗ ಶುರುವಾಗಿವೆ. ಇದಕ್ಕೆ ಪುಷ್ಠಿ ನೀಡಿದಂತೆ ಕಾಣುವ ಪ್ರಾಕ್ಟಿಸ್ ಡ್ರೆಸ್. ಮೊದಲು ಪ್ರಾಕ್ಟಿಸ್ ಡ್ರೆಸ್ ಕಡು ನೀಲಿ ಬಣ್ಣದ್ದಾಗಿತ್ತು. ಆದರೆ ಈ ಬಾರಿ ನೀಲಿ ಹಾಗೂ ಕೆಂಪು ಬಣ್ಣದ ಡ್ರೆಸ್‌ನಲ್ಲಿ ಆಟಗಾರರು ಕಂಗೊಳಿಸಿದ್ದಾರೆ.