ಚೆನ್ನೈ : ಯುವನಾಯಕ ಋತುರಾಜ್ ಗಾಯಕವಾಡ ಅವರ ನಾಯಕತ್ವದಲ್ಲಿ ಚೊಚ್ಚಲ ಪಂದ್ಯವಾಡಿದ ಚೆನ್ನೈ ಸೂಪರ್ ಕಿಂಗ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಚೆನ್ನೈ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲು ಕಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 176 ರನ್ ಗಳಿಸಿದರೂ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಿಎಸ್ಕೆ 6 ವಿಕೆಟ್ಗಳ ಜಯ ಸಾಧಿಸಿದೆ.
ಪೋಸ್ಟ್ ಮ್ಯಾಚ್ ಪ್ರೆಸೆಂಡೇಷನ್ನಲ್ಲಿ ಮಾತನಾಡಿದ ಆರ್ಸಿಬಿ ನಾಯಕ ಫಾಪ್ ಡುಪ್ಲೆಸಿಸ್, ನೀವು ಯಾವಾಗಲೂ ಆಡುವಾಗ, ಆರು ಓವರ್ಗಳ ನಂತರ ಸ್ವಲ್ಪ ಡಿಪ್ ಪಡೆಯುತ್ತೀರಿ. ಈ ಪಂದ್ಯದ ಮಧ್ಯಮ ಓವರ್ಗಳಲ್ಲಿ ಚೆನ್ನೈ ಉತ್ತಮ ಬೌಲಿಂಗ್ ಪ್ರದರ್ಶಿಸಿದೆ. ಚೆನ್ನೈ ಆಟಗಾರರು ತಮ್ಮ ಸ್ಪಿನ್ನರ್ಗಳಿಂದ ಹಿಡಿತ ಸಾಧಿಸಿದರು ಎಂದು ಹೇಳಿದ್ದಾರೆ.
ನಂತರ ಮಾತನಾಡಿದ ಅವರು, ನಾವು ಸುಮಾರು 15ರಿಂದ 20 ರನ್ ಕಡಿಮೆ ಹೊಡೆದವು. ಇದು ಸೋಲಿಗೆ ಕಾರಣವಾಯಿತು. ಪಿಚ್ ನಾವು ಮೊದಲ 10 ಓವರ್ಗಳಲ್ಲಿ ಆಡಿದಷ್ಟು ಕೆಟ್ಟದಾಗಿರಲಿಲ್ಲ. ಅವರು ಚೇಸಿಂಗ್ನಲ್ಲಿ ಮುಂದಿದ್ದರು. ನಾವು ಅವರನ್ನು ಕಟ್ಟಿ ಹಾಕಲು ಮತ್ತು ಒಂದೆರಡು ವಿಕೆಟ್ಗಳನ್ನು ಪಡೆಯಲು ಪ್ರಯತ್ನಿಸಿದೆವು. ಆದರೆ ಕೊನೆಯಲ್ಲಿ ನಮ್ಮ ಬಳಿ ಸಾಕಷ್ಟು ಎನ್ ಇರಲಿಲ್ಲ ಎಮದು ಡುಪ್ಲೆಸಿಸ್ ಹೇಳಿದರು.