Wednesday, April 30, 2025
32 C
Bengaluru
LIVE
ಮನೆಸಿನಿಮಾನಾವು ಸಾವಿನಿಂದ ಪಾರಾದೆವು ; ಆತಂಕಕ್ಕೆ ಕಾರಣವಾದ ರಶ್ಮಿಕಾ ಮಂದಣ್ಣ ಹೇಳಿಕೆ

ನಾವು ಸಾವಿನಿಂದ ಪಾರಾದೆವು ; ಆತಂಕಕ್ಕೆ ಕಾರಣವಾದ ರಶ್ಮಿಕಾ ಮಂದಣ್ಣ ಹೇಳಿಕೆ

ಕೊಡಗಿನ ಬೆಡಗಿ, ನ್ಯಾಶನಲ್ ಕ್ರಶ್’ ಖ್ಯಾತಿಯ ರಶ್ಮಿಕಾ ಮಂದಣ್ಣ ಸಂಚರಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದು, ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ರಶ್ಮಿಕಾ ಜತೆ ಈ ವೇಳೆ ನಟಿ ಶ್ರದ್ಧಾ ದಾಸ್ ಕೂಡ ಇದ್ದರು.

ಘಟನೆ ಬಗ್ಗೆ ನಟಿ ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿನಲ್ಲಿ “ಇಂದು ನಾವು ಸಾವಿನಿಂದ ಪಾರಾಗಿದ್ದೇವೆ” ಎಂದು ಬರೆದುಕೊಂಡಿದ್ದು, ಈ ಸ್ಟೋರಿ ಭಾರಿ ವೈರಲ್ ಆಗಿದೆ. ಇನ್ನು ಇದನ್ನು ನೋಡಿದ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ರಶ್ಮಿಕಾ ಇತ್ತೀಚೆಗಷ್ಟೇ ಮುಂಬೈಗೆ ತೆರಳಿದ್ದರು. ಬಳಿಕ ತಮ್ಮ ಚಿತ್ರೀಕರಣ ಪೂರ್ಣಗೊಳಿಸಿ ಶನಿವಾರ ಹೈದರಾಬಾದ್​ಗೆ ವಾಪಸ್ಸಾಗಲು ರಶ್ಮಿಕಾ ಏರ್ ವಿಸ್ತಾರ ವಿಮಾನ ಹತ್ತಿದ್ದು, ಈ ವಿಮಾನ ತಾಂತ್ರಿಕ ಸಮಸ್ಯೆ ಹಿನ್ನೆಲೆ ಮುಂಬೈ ವಿಮಾನ ನಿಲ್ದಾಣದಲ್ಲೇ ತುರ್ತು ಭೂಸ್ಪರ್ಶ ಮಾಡಿದೆ.

ತುರ್ತು ಭೂಸ್ಪರ್ಶದ ವೇಳೆ ವಿಮಾನ ಸಿಬ್ಬಂದಿ ನೀಡಿದ ಸೂಚನೆಯಂತೆ, ರಶ್ಮಿಕಾ ಹಾಗೂ ಶ್ರದ್ಧಾ ತಮ್ಮ ಕಾಲುಗಳಿಂದ ಎದುರಿನ ಸೀಟ್ ನ ಹಿಂಬದಿಯನ್ನು ಜೋರಾಗಿ ಒತ್ತಿ ಹಿಡಿದುಕೊಂಡಿದ್ದಾರೆ. ಈ ಫೋಟೋವನ್ನು ರಶ್ಮಿಕಾ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments