
ರಾಮೇಶ್ವರಂ ಕೆಫೆ ಸ್ಫೋಟಕಕ್ಕೆ ಸಂಬಂಧಿಸಿದಂತೆ ತನಿಖಾ ತಂಡವು ಶಂಕಿತ ಉಗ್ರನಿಗೆ ನೆರವು ನೀಡಿದ ಆಧಾರದ ಮೇಲೆ ಬೆಂಗಳೂರಿನಲ್ಲಿ ಓರ್ವನನ್ನ, ಬಳ್ಳಾರಿಯಲ್ಲಿ ಯುವಕನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಳ್ಳಾರಿಯಲ್ಲಿ ಮತ್ತೊಬ್ಬ ಯುವಕನನ್ನ ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಯುವಕನನ್ನು ಸತತ ಒಂದು ಗಂಟೆ ಕಾಲ ವಿಚಾರಣೆ ನಡೆಸಲಾಗಿದೆ.
ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯ ಮಾಲೀಕರ ಆಸೆಯಂತೆ ಶಿವರಾತ್ರಿ ಹಬ್ಬದಂದೇ ಕೆಫೆಯನ್ನು ರೀ-ಓಪನ್ ಮಾಡಲು ರಾಜ್ಯ ಸರ್ಕಾರ ಅವಕಾಶ ನೀಡಿದೆ. ಅದರಂತೆ ನಾಳೆಯೇ ರಾಮೇಶ್ವರಂ ಕೆಫೆಯ ಮತ್ತೆ ಆರಂಭವಾಗುತ್ತಿದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಮತ್ತು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಭಾಗಿಯಾಗುತ್ತಿದ್ದಾರೆ.




