ರಾಜ್ಯಸುದ್ದಿ

ಶಾಸಕ ರಾಜಾ ವೆಂಕಟಪ್ಪನಾಯಕ ಅವರ ಅಂತಿಮಯಾತ್ರೆಯಲ್ಲಿ ಸಿಎಂ ಭಾಗಿ

ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ ದಿ.ರಾಜಾ ವೆಂಕಟಪ್ಪನಾಯಕ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಪುಷ್ಪ ಗುಚ್ಛವಿರಿಸಿ ಗೌರವ ಅರ್ಪಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ, ಗ್ರಾಮೀಣಾಭಿವೃದ್ಧಿ ಪಂಚಾಯತರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಪ್ರಿಯಾಂಕ ಖರ್ಗೆ, ಯುವಸಬಲೀಕರಣ, ಕ್ರೀಡೆ, ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಶ್ರೀ ನಾಗೇಂದ್ರ, ಲೋಕೋಪಯೋಗಿ ಸಚಿವ ಶ್ರೀ ಸತೀಶ ಜಾರಕಿಹೊಳಿ, ರಾಯಚೂರ ಸಂಸದ ರಾಜಾ ಅಮರೇಶ್ವರ್ ನಾಯಕ, ಅಮರೇಶ ಬಯ್ಯಾಪುರ, ಎಐಸಿಸಿ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ,ರಾಜಾ ಕೃಷ್ಣಪ್ಪ ನಾಯಕ,ವಾಲ್ಮೀಕಿ ಶ್ರೀಗಳು, ಐಜಿ ಅಜಯ್ ಹಿಲೋರಿ, ಡಿ.ಸಿ.ಸುಶೀಲಾ. ಬಿ, ಸಿಇಓ ಗರಿಮಾ ಪನ್ವಾರ್, ಎಸ್.ಪಿ.ಸಂಗೀತಾ.ಜಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದು, ಗೌರವ ಅರ್ಪಿಸಿದರು.

Comments (0)

Your email address will not be published. Required fields are marked *

Back to top button