ರಾಯಚೂರು: ಲಾಡ್ಜ್‌ವೊಂದರಲ್ಲಿ ಜೂಜಾಟ ತೊಡಗಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಲಕ್ಷಾಂತರ ರೂಪಾಯಿ ಹಣವನ್ನ ಜಪ್ತಿ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ನಗರದ ಸಂತೋಷ ಹೊಟೇಲ್ ಕೊಠಡಿಯೊಳಗೆ ಅಕ್ರಮವಾಗಿ ಜೂಜಾಟದಲ್ಲಿ ತೊಡಗಿರುವ ಖಚಿತ ಮಾಹಿತಿ ಮೆರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 4.53 ಲಕ್ಷ ರೂಪಾಯಿ ನಗದು ಹಣ, ಇಸ್ಪೀಟು ಎಲೆಗಳು, ಆಟದಲ್ಲಿ ತೊಡಗಿದ್ದ 8 ಜನರನ್ನ ವಶಪಡಿಸಿಕೊಳ್ಳಲಾಯಿತು. ವಿರೇಶ ರೆಡ್ಡಿ, ಈಶ್ವರ, ಮಂಜುನಾಥ, ತಿಮ್ಮಾರೆಡ್ಡಿ, ವಸಂತ, ಸುರೇಶ.ಟಿ., ಶ್ರೀನಿವಾಸ, ಸುರೇಶ ಎಂಬುವವರನ್ನು ಬಂಧಿಸಲಾಗಿದೆ.
ಜೂಜಾಟದಲ್ಲಿ ತೊಡಗಿರುವ ಖಚಿತ ಮಾಹಿತಿ ಆಧಾರದ ಮೇಲೆ ಡಿವೈಎಸ್ಪಿ ಸತ್ಯನಾರಾಯಣ ನೇತೃತ್ವದಲ್ಲಿ ಸದರ್ ಬಜಾರ್ ಪಿಐ ಗುರುರಾಜ ಕಟ್ಟಿಮನಿ ಸೇರಿದಂತೆ ಸಿಬ್ಬಂದಿ ತಂಡ ದಾಳಿ ನಡೆಸಿದೆ. ಆಗ ಕೊಠಡಿಯೊಳಗೆ ಆಟಕ್ಕೆ ಬಳಸಿದ ಇಸ್ಪೀಟು ಎಲೆಗಳು, 4.53 ಲಕ್ಷ ರೂಪಾಯಿ ನಗದು ಹಣ ಜೊತೆ ಆಟದಲ್ಲಿ ನಿರತರನ್ನ ಆರೇಸ್ಟ್ ಮಾಡಲಾಗಿದೆ. ಈ ಕುರಿತಂತೆ ಸದರ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.