ರಾಯಚೂರು: ಬಿಜೆಪಿಯಿಂದ ಮಾಜಿ ಸಂಸದ ಬಿ.ವಿ ನಾಯಕ್ ಗೆ ಟಿಕೆಟ್ ಕೈ ತಪ್ಪಿದ ವಿಚಾರವಾಗಿ ರಾಯಚೂರಲ್ಲಿ ಮಾಜಿ ಸಂಸದ ಬಿ.ವಿ ನಾಯಕ್ ಪ್ರತಿಕ್ರಿಯೆ ನೀಡಿದ್ದಾರೆ, ನಾನು ವೈಯಕ್ತಿಕ ಆವೇಷದಿಂದ ನಿರ್ಧಾರ ತೆಗೆದುಕೊಳ್ಳಲು ಆಗಲ್ಲ. ನಾಳೆ ಅಥವಾ ನಾಡಿದ್ದು ಸಮಾನ ಮನಸ್ಕರ ಸಭೆ ಕರೆಯುತ್ತೇನೆ. ಪಕ್ಷದ ತೀರ್ಮಾನವನ್ನ ಪುರಸ್ಕಾರ ಮಾಡಲ್ಲ ಮತ್ತು ತಿರಸ್ಕರಿಸಲ್ಲ. ಈ ಪಕ್ಷದಲ್ಲಿ ನಾನು ಅಷ್ಟರಮಟ್ಟಿಗೆ ಬೆಳೆದಿಲ್ಲ ಎಂದು ಹೇಳಿದರು.
ಮಲತಾಯಿ ಮಗನಂತೆ ನೋಡಿದ ಭಾವನೆ ಮೂಡಿದೆ. ಮೊದಲೇ ಹೇಳಿದ್ದರೆ, ನಾನು ಈ ಪ್ರಯತ್ನ ಮಾಡ್ತಿರಲಿಲ್ಲ. ಅವರೇ ಅವಕಾಶ ಕೊಡ್ತೀವಿ ಅಂತಾ ಹೇಳಿದ್ರು. ಪಕ್ಷ ಬದಲಾವಣೆ ಬಗ್ಗೆ ಕಾರ್ಯಕರ್ತರ ಜೊತೆ ತೀರ್ಮಾನ ಮಾಡ್ತೀನಿ. ಸದ್ಯ ನಾನು ತಟಸ್ಥವಾಗಿದ್ದೀನಿ, ನನಗೆ ನಿರಾಶೆಯಂತು ಆಗಿದೆ. ಹೈಕಮಾಂಡ್ ತಿರ್ಮಾನದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.
ನಾನು ಕೂಡ ಈ ಪಕ್ಷದಲ್ಲಿ ಹೊಸಬ. ಜೀವನದಲ್ಲಿ ವನವಾಸ ಅನುಭವಿಸಿದ್ದೀನಿ. ರಾಜಕೀಯದಲ್ಲಿ ಹಿತಶತ್ರುಗಳನ್ನ ಕೂಡ ಎದುರಿಸಿದ್ದೀನಿ. ಈ ಪಕ್ಷದಲ್ಲಿ ಮುಕ್ತವಾಗಿ ಉಸಿರಾಟ ಮಾಡಬಹುದು ಅಂದ್ಕೊಂಡಿದ್ದೆ. ಯಾವ ಕಾರ್ಯಕರ್ತರನನ್ನು ನಾನು ಬಲಿಕೊಡಲ್ಲ. ದೇವರು ಅವರಿಗೆ ಒಳ್ಳೆಯದು ಮಾಡ್ಲಿ ಎಂದು ಬಿ.ವಿ ನಾಯಕ್ ಹೇಳಿದರು.


