Monday, December 8, 2025
18.9 C
Bengaluru
Google search engine
LIVE
ಮನೆಕ್ರೈಂ ಸ್ಟೋರಿಪಿಎಸ್ಐ ನೇಮಕಾತಿ ಹಗರಣ, ಮತ್ತೆ ಮೂವರು ಅರೆಸ್ಟ್

ಪಿಎಸ್ಐ ನೇಮಕಾತಿ ಹಗರಣ, ಮತ್ತೆ ಮೂವರು ಅರೆಸ್ಟ್

ಬೆಂಗಳೂರು : ಪಿಎಸ್ಐ ನೇಮಕಾತಿ ಅಕ್ರಮ ಹಗರಣದಲ್ಲಿ ಮೂವರು ಆರೋಪಿಗಳನ್ನ ಕಲಬುರಗಿಯಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ‌.ಷಹಾಬಾದ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ​ಪ್ರಥಮದರ್ಜೆ ಸಹಾಯಕನಾಗಿದ್ದ ಚಂದ್ರಕಾಂತ್ ಪ್ಯಾಟಿ, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಶಶಿಧರ್ ಹಾಗೂ ಅಫ್ಜಲಪುರದ ಹಾಸ್ಟೆಲ್ ವಾರ್ಡನ್ ಬಸವರಾಜ್​​ ಸಿದ್ದರಾಮಪ್ಪ ಎಂಬಾತನನ್ನ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಪ್ರಮುಖ‌ ಆರೋಪಿ ಆರ್.ಡಿ ಪಾಟೀಲ್ ಜೊತೆ ಸಂಪರ್ಕವಿದ್ದ ಆರೋಪಿಗಳು, ಪರೀಕ್ಷಾ ಅಭ್ಯರ್ಥಿಗಳಿಗೆ ಬ್ಲೂಟೂತ್ ಮೂಲಕ ಉತ್ತರ ಹೇಳಿದ್ದ ಆರೋಪವಿದೆ. ಆರೋಪಿಗಳ ವಿರುದ್ಧ ಕಲಬುರಗಿಯ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಶನಿವಾರ ಮಧ್ಯಾಹ್ನ ಕಲಬುರಗಿಯಲ್ಲಿ ಮೂವರನ್ನೂ ಬಂಧಿಸಿರುವ ಸಿಐಡಿ ಪೊಲೀಸರು ವಿಚಾರಣೆಗೊಳಪಡಿಸಿದ ಬಳಿಕ ಕಲಬುರಗಿ ಪ್ರಧಾನ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments