Wednesday, April 30, 2025
24 C
Bengaluru
LIVE
ಮನೆಸುದ್ದಿದೇಶದ ಪ್ರಥಮ ಜಲಂತರ್ಗಾಮಿ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ಚಾಲನೆ...!

ದೇಶದ ಪ್ರಥಮ ಜಲಂತರ್ಗಾಮಿ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ಚಾಲನೆ…!

ನವದೆಹಲಿ: ದೇಶದ ಮೊಟ್ಟ ಮೊದಲ ಜಲದೊಳಗಿನ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಚಾಲನೆ ನೀಡಿದರು. ಅವರು 15,400 ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಇದೇ ವೇಳೆ ಶಂಕುಸ್ಥಾಪನೆ ಮಾಡಿದರು. ಈ ವೇಳೆ ಮೆಟ್ರೋ ಕಾರ್ಮಿಕರು ಮತ್ತು ವಿದ್ಯಾರ್ಥಿಗಳೊಂದಿಗೆ ಈ ಮಾರ್ಗದಲ್ಲಿ ಮೊದಲ ಸಂಚಾರ ಬಾರಿಗೆ ಪಯಣಿಸಿದರು. ಅವರೊಂದಿಗೆ ಸಂವಾದವನ್ನು ಮಾಡಿದರು. ಇದಲ್ಲದೇ, ನಿಲ್ದಾಣದಲ್ಲಿ ಸಂದರ್ಭದಲ್ಲಿ ಸೇರಿದ್ದ ಜನರತ್ತ ಕೈ ಬೀಸಿ, ಸುಖಕರ ಪ್ರಯಾಣಕ್ಕೆ ಶುಭ ಹಾರೈಸಿದರು.

ಸಂಪರ್ಕ ಎಲ್ಲಿಗೆ ಗೊತ್ತಾ?: ಜಲದೊಳಗಿನ ಈ ಮೆಟ್ರೋ ಯೋಜನೆಯು ಕೋಲ್ಕತ್ತಾದ ಅವಳಿ ನಗರಗಳಾದ ಹೌರಾ ಮತ್ತು ಸಾಲ್ಟ್ ಲೇಕ್ ಅನ್ನು ಸಂಪರ್ಕಿಸುತ್ತದೆ. ಈ ಮಾರ್ಗದ 6 ನಿಲ್ದಾಣಗಳಲ್ಲಿ 3 ನಿಲ್ದಾಣಗಳು ನೀರಿನೊಳಗಿವೆ. ಕೋಲ್ಕತ್ತಾ ಮೆಟ್ರೋದ ಪೂರ್ವ-ಪಶ್ಚಿಮ ಕಾರಿಡಾರ್‌ನ ಹೌರಾ ಮೈದಾನ-ಎಸ್ಸ್ಪಲನೇಡ್ ವಿಭಾಗಕ್ಕೆ ಬರುತ್ತದೆ. ಇದು ಹೂಗ್ಲಿ ನದಿಯ ಅಡಿಯಲ್ಲಿ 16.6 ಕಿ.ಮೀ ದೂರವನ್ನು ಕ್ರಮಿಸುತ್ತದೆ.
ಮೋದಿಯಿಂದ ಮಕ್ಕಳ ಜೊತೆ ಸಂವಾದ: ಮೆಟ್ರೋ ಮಾರ್ಗ ಉದ್ಘಾಟನೆ ನಂತರ, ಶಾಲಾ ವಿದ್ಯಾರ್ಥಿಗಳ ಜೊತೆಗೆ ಕುಳಿತು ನೀರೊಳಗಿನ ಮೆಟ್ರೋದಲ್ಲಿ ಪ್ರಧಾನಿ ಮೊದಲ ಸಂಚಾರ ಮಾಡಿದರು. ಮೆಟ್ರೋ ಸಿಬ್ಬಂದಿಯೊಂದಿಗೆ ಸಹ ಇದೇ ವೇಳೆ ಮಾತುಕತೆ ನಡೆಸಿದರು. ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments