2024ರ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಹಿಳೆಯರ ಫೈಟ್ ಆಗುತ್ತಾ.? ಇಂತಹದ್ದೊಂದು ಪ್ರಶ್ನೆ ಇದೀಗ ಎದುರಾಗಿದೆ. ಕಾಂಗ್ರೆಸ್ ನಿಂದ ಸೌಮ್ಯ ರೆಡ್ಡಿ ದಕ್ಷಿಣದ ಅಭ್ಯರ್ಥಿಯಾಗಿ ಸ್ಪರ್ಧಿಸೋ ಸಾಧ್ಯತೆ ಇದೆ. ಪುತ್ರಿಗೆ ಟಿಕೆಟ್ ಕೊಡಿಸುವಲ್ಲಿ ಸಕ್ಸಸ್ ಆಗ್ತಾರಾ ಸಚಿವ ರಾಮಲಿಂಗಾರೆಡ್ಡಿ ಎಂಬ ಪ್ರಶ್ನೆ ಉದ್ಭವವಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ 16 ಮತಗಳಿಂದ ಸೋತಿದ್ದ ಸೌಮ್ಯರೆಡ್ಡಿ, ಈ ಬಾರಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಬೆಂಗಳೂರಿನ 3 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಮಣೆ ಹಾಕಲು ಕಾಂಗ್ರೆಸ್ ಚಿಂತನೆ ನಡೆಸಿದೆ.
ಅತ್ತ ಬಿಜೆಪಿಯಲ್ಲೂ ದಕ್ಷಿಣದಿಂದ ತೇಜಸ್ವಿನಿ ಅನಂತ್ ಕುಮಾರ್ ಹೆಸರು ಚಾಲ್ತಿಗೆ ಬಂದಿದೆ. ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ ವರ್ಸಸ್ ಸೌಮ್ಯ ರೆಡ್ಡಿ ಕದನ ಆಗುತ್ತಾ.? ಎಂಬ ಕೂತುಹಲ ಮತರಾರರದ್ದು. ಬಿಜೆಪಿ ಪ್ರಾಬಲ್ಯ, ಬಿಜೆಪಿ ಭದ್ರಕೋಟೆ ಆಗಿರೋ ಬೆಂಗಳೂರು ದಕ್ಷಿಣ ಕ್ಷೇತ್ರ ಛಿದ್ರ ಮಾಡಲು ಕಾಂಗ್ರೆಸ್ ಹೈಕಮಾಂಡ್ ಪ್ಲಾನ್ ಮಾಡಿದೆ. ದಕ್ಷಿಣದಿಂದ ಮಗಳನ್ನ ಗೆಲ್ಲಿಸಲು ರಾಮಲಿಂಗಾರೆಡ್ಡಿಗೆ ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಸಾಥ್ ನೀಡಲಿದ್ದಾರೆ. ಡಿಸಿಎಂ, ಬೆಂಗಳೂರು ಉಸ್ತುವಾರಿ ಡಿಕೆಶಿಗೂ ಈ ಕ್ಷೇತ್ರ ಪ್ರತಿಷ್ಠೆಯ ಪ್ರಶ್ನೆ