ಕೊಡಗು : ವಿಧಾನಸಭಾ ಮಾಜಿ ಸ್ಪೀಕರ್, ವಿರಾಜಪೇಟೆ ಮಾಜಿ ಶಾಸಕರಾದ ಕೆ.ಜಿ. ಬೊಪಯ್ಯ ಫ್ರೀಡಂ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕೊಡಗು ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಲು ತಾನು ಯಾವುದೇ ರೀತಿಯ ಪ್ರಯತ್ನ ಪಟ್ಟಿಲ್ಲ ಹಾಗೆ ಬೇಡಿಕೆಯನ್ನು ಕೂಡ ವರಿಷ್ಠರ ಮುಂದೆ ಇಟ್ಟಿಲ್ಲ ಎಂದು ಮಾಜಿ ವಿಧಾನಸಭಾ ಸ್ಪೀಕರ್ ಕೆ.ಜಿ ಬೊಪಯ್ಯನವರು ಸ್ಪಷ್ಟನೆ ನೀಡಿದ್ದಾರೆ.
ಫ್ರೀಡಂ ಟಿವಿ ಗೆ ಮಾಹಿತಿ ನೀಡಿದ ಮಾಜಿ ಸ್ಪೀಕರ್ ಕೆ. ಜಿ. ಬೋಪಯ್ಯ. ಈ ಹಿಂದೆ ಬಂದ ವರದಿಯ ಬಗ್ಗೆ ಮಾತನಾಡಿದ ಅವರು ಪಕ್ಷದ ವರಿಷ್ಠರು ತೀರ್ಮಾನಿಸಿ ಯಾರೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಅವರ ಪರವಾಗಿ, ಪಕ್ಷದ ಪರವಾಗಿ ಕ್ಷೇತ್ರದಾದ್ಯಂತ ಓಡಾಡಿ ಮತ ಕೇಳುತ್ತೇವೆ.
ಹೊರತು ತನಗೆ ಟಿಕೆಟ್ ನೀಡುವಂತೆ ಯಾರ ಬಳಿಯೂ ನಾನು ಬೇಡಿಕೆ ಇಟ್ಟಿಲ್ಲ ಹಾಗೆ ಪ್ರಭಾವವನ್ನು ಬೀರಿಲ್ಲ ಎಂದು ಹೇಳಿದ್ದಾರೆ. ಜಿಲ್ಲೆಯ ಜನತೆ ಊಹಾಪೋಹಗಳಿಗೆ ಕಿವಿಗೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.