ಕೊಪ್ಪಳದಲ್ಲಿ ಬಿಜೆಪಿಗೆ ಥರ್ಡ್ ಪ್ಲೇಸ್ ಬರಲಿದೆ ಎಂದು ಶಾಸಕ ಕೆಆರ್ ಪಿಪಿ ನಾಯಕ ಜನಾರ್ಧನ್ ರೆಡ್ಡಿ ಗುಡುಗಿದ್ದಾರೆ. ಗಂಗಾವತಿ ವಿಧಾನಸಭಾ ಚುನಾವಣೆಯಲ್ಲಿ ಹೇಗೆ ಬಿಜೆಪಿ ಮೂರನೇ ಸ್ಥಾನಕ್ಕೆ ಹೋಯ್ತೋ ಹಾಗೇ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಹೋಗುತ್ತೆ ಎಂದು ಗಂಗಾವತಿಯಲ್ಲಿ ನಡೆದ ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಜನಾರ್ಧನ್ ರೆಡ್ಡಿ ಗುಡುಗಿದ್ದಾರೆ.
ಈ ಮಧ್ಯೆ ಕೊಪ್ಪಳ ಸಂಸದ ಕರಡಿ ಸಂಗಣ್ಣಗೆ ಟಿಕೆಟ್ ಡೌಟ್ ಎನ್ನಲಾಗುತ್ತಿದೆ. ಎರಡು ದಿನಗಳ ಹಿಂದೆ ಜನಾರ್ಧನ್ ರೆಡ್ಡಿ ಬಿಜೆಪಿ ನಾಯಕರ ಗುಪ್ತ ಮಾತುಕತೆ ನಡೆಸಿದ್ರು. ಮಾತುಕತೆ ಬಳಿಕ ರೆಡ್ಡಿ ಕೊಪ್ಪಳದಲ್ಲಿ ಬಿಜೆಪಿ ಸೋಲಿಸುತ್ತೇನೆ ಎಂದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಬಾರಿ ಕೊಪ್ಪಳದಲ್ಲಿ ಕಾಂಗ್ರೆಸ್ ರಣತಂತ್ರ ಏನಾಗಿರಲಿದೆ ಎಂಬ ಹೊಸ ಚರ್ಚೆ ಶುರುವಾಗಿದೆ.