ರಾಜಕೀಯರಾಜ್ಯಸುದ್ದಿ

ರಾಜ್ಯ ಬಿಜೆಪಿಗೆ ಹೊಸ ತಂಡ; ವಕ್ತಾರರು, ಸಂಚಾಲಕರ ನೇಮಕ!

ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಹಾಗೂ ವಕ್ತಾರರ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, 11 ಮಂದಿಯನ್ನು ಮುಖ್ಯ ವಕ್ತಾರ ಹಾಗೂ ವಕ್ತಾರರಾಗಿ ನೇಮಕ ಮಾಡಲಾಗಿದೆ. ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ ಅವರು ಬಿಜೆಪಿ ಮುಖ್ಯ ವಕ್ತಾರರು ಮತ್ತು ವಕ್ತಾರರು ಮತ್ತು ವಿವಿಧ ಪ್ರಕೋಷ್ಠಗಳಿಗೆ ಸಂಚಾಲಕ ಹಾಗೂ ಸಹಸಂಚಾಲಕರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.

ಮುಖ್ಯ ವಕ್ತಾರರಾಗಿ ಅಶ್ವತ್ಥ ನಾರಾಯಣ ( ಮಾಜಿ ವಿಧಾನಪರಿಷತ್ ಸದಸ್ಯ) ನೇಮಕ ಮಾಡಲಾಗಿದೆ. ಇನ್ನು ವಕ್ತಾರರಾಗಿ ಹರಿಪ್ರಕಾಶ್ ಕೊಣೆಮನೆ, ಛಲವಾದಿ ನಾರಾಯಣ ಸ್ವಾಮಿ ನೇಮಕಗೊಂಡಿದ್ದಾರೆ. ಉಳಿದಂತೆ, ತೇಜಸ್ವಿನಿ ಗೌಡ, ಕೆ.ಎಸ್ ನವೀನ್, ಎಂ.ಜಿ ಮಹೇಶ್, ಎಚ್‌.ಎನ್ ಚಂದ್ರಶೇಖರ್, ನರೇಂದ್ರ ರಂಗಪ್ಪ, ಸುರಭಿ ಹೊದಿಗೆರೆ, ಅಶೋಕ್ ಕೆ.ಎಂ ಗೌಡ, ಎಚ್‌ ವೆಂಕಟೇಶ್ ದೊಡ್ಡೇರಿಯನ್ನು ನೇಮಕ ಮಾಡಲಾಗಿದೆ.

 


ಇನ್ನು ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಪ್ರಶಾಂತ್ ಮಾಕನೂರು, ಸಹ ಸಂಚಾಲಕರಾಗಿ ನರೇಂದ್ರ ಮೂರ್ತಿ ಅವರನ್ನು ನೇಮಕ ಮಾಡಲಾಗಿದೆ. ಮಾಹಿತಿ ತಂತ್ರಜ್ಞಾನ ವಿಭಾಗದ ಸಂಚಾಲಕರಾಗಿ ನಿತಿನ್ ರಾಜ್ ನಾಯಕ್, ಸಹ ಸಂಚಾಲಕರಾಗಿ ಶ್ಯಾಮಲಾ ರಘುನಂದನ್ ಅವರನ್ನು ನೇಮಿಸಲಾಗಿದೆ.
ಮಾಧ್ಯಮ ವಿಭಾಗದ ಸಂಚಾಲಕರಾಗಿ ಕರುಣಾಕರ ಖಾಸಲೆ ಹಾಗೂ ಸಹ ಸಂಚಾಲಕರಾಗಿ ಪ್ರಶಾಂತ್ ಕೆಡಂಜಿ ಅವರನ್ನು ನೇಮಕ ಮಾಡಲಾಗಿದೆ. ವಕ್ತಾರದ ಪಟ್ಟಿಯಲ್ಲಿ ಕೆಲವೊಂದು ಮಾರ್ಪಾಡುಗಳು ಈ ಬಾರಿ ಮಾಡಲಾಗಿದೆ. ವಿಜಯೇಂದ್ರ ಅಧ್ಯಕ್ಷರಾದ ಬಳಿಕ ವಿವಿಧ ಪ್ರಕೋಷ್ಠಗಳನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತಮ್ಮದೇ ಆದ ಹೊಸ ತಂಡವನ್ನು ಕಟ್ಟುತ್ತಿದ್ದಾರೆ.

 

Comments (0)

Your email address will not be published. Required fields are marked *

Back to top button