Friday, September 12, 2025
22.5 C
Bengaluru
Google search engine
LIVE
ಮನೆರಾಜಕೀಯಉ. ಕನ್ನಡ ಬಿಜೆಪಿ ಅಭ್ಯರ್ಥಿ ವಿರುದ್ಧ ಪಕ್ಷೇತರರಾಗಿ ಅನಂತ್​​ ಕುಮಾರ್​ ಹೆಗಡೆ ಪರಮಾಪ್ತ ಸ್ಪರ್ಧೆ ?

ಉ. ಕನ್ನಡ ಬಿಜೆಪಿ ಅಭ್ಯರ್ಥಿ ವಿರುದ್ಧ ಪಕ್ಷೇತರರಾಗಿ ಅನಂತ್​​ ಕುಮಾರ್​ ಹೆಗಡೆ ಪರಮಾಪ್ತ ಸ್ಪರ್ಧೆ ?

” ಸಂಸದ ಅನಂತ್ ಕುಮಾರ್ ಹೆಗಡೆ ಲೋಕಸಭಾ ಟಿಕೆಟ್ ನಿರಾಕರಣೆ ನಂತರ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ ಹೆಗಡೆ ಕಾಗೇರಿಗೆ ಕ್ಷೇತ್ರದಲ್ಲಿ ಪ್ರಬಲ ಭಿನ್ನಮತ ಕಾಡುತ್ತಿದ್ದು, ಸಂಸದ ಅನಂತ್ ಕುಮಾರ್ ಹೆಗಡೆ ನಿವಾಸದ ಬಳಿ ಅವರನ್ನು ಭೇಟಿ ಮಾಡಲು ಬಂದು ಭೇಟಿಯಾಗದೆ ಹಿಂದುರಿಗಿದ ಬಿಜೆಪಿ ಅಭ್ಯರ್ಥಿ ಪ್ರಬಲ ಹಿಂದುತ್ವ ವಾದಿ ಹಾಗೂ ಕಳೆದ ಮೂವತ್ತು ವರ್ಷಗಳಿಂದ ಸಂಸದರಾಗಿದ್ದ ಅನಂತಕುಮಾರ‌ ಹೆಗಡೆ ಬದಲಾಗಿ ಮಾಜಿ ಸ್ವೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಉತ್ತಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಿದ ನಂತರದಲ್ಲಿ ದಿನಕ್ಕೊಂದು ರಾಜಕೀಯ ವಿದ್ಯಮಾನಗಳು ಚುರುಕು ಪಡೆದುಕೊಳ್ಳುತ್ತಿದೆ.

ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಉ.ಕ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಬಗ್ಗೆ ಅಸಮಾಧಾನದ ಹೊಗೆ ಎದ್ದಿದ್ದು, ಫೈಯರ್ ಬ್ರಾಂಡ್ ಅನಂತ ಕುಮಾರ ಹೆಗಡೆ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಅವರ ಕುರಿತಾಗಿ ಪ್ರಖರ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾವೇರಿ ಅನಂತ್ ಕುಮಾರ್ ಹೆಗಡೆಯವರನ್ನು ಭೇಟಿ ಮಾಡಲು ತೆರಳಿದರು ಅನಂತಕುಮಾರ್ ಹೆಗಡೆ ಭೇಟಿಯಾಗಿಲ್ಲ ಎಂದು ತಿಳಿದು ಬಂದಿದೆ.

ಅನಂತಕುಮಾರ್ ಹೆಗಡೆಯವರ ಪರಮಾಪ್ತ ಕೃಷ್ಣ ಎಸಳೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಕೃಷ್ಣ ಎಸಳೆ ಅನಂತಕುಮಾರ್ ಹೆಗಡೆಯವರ ಪರಮಾಪ್ತರಾಗಿದ್ದು, ಪ್ರಖರ ಹಿಂದುತ್ವವಾದಿಯಾಗಿಯೂ ಇವರು ಗುರುತಿಸಿಕೊಂಡವರು. ಅವರು ನಾಳೆ ಬೆಂಗಳೂರಿಗೆ ತೆರಳುವ ನಿರೀಕ್ಷೆಯಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments