ದೇವ್ ತಾಪ... ಯಾರ್ ತಾನೇ ಕೇಳಿಲ್ಲ ಹೇಳಿ ಈ ಹೆಸರು ,ಕುಸ್ತಿ ಪಟುಗಳ ಪೈಕಿ ಅತ್ಯಂತ ಕಿಲಾಡಿ ಕುಸ್ತಿ ಪಟು ,ನೋಡೋದಿಕ್ಕೆ ಕುಬ್ಜ…ಜಸ್ಟ್ ನಾಲ್ಕೂವರೆ ಅಡಿ ಹೈಟು…ಮಾಡೋ ಫೈಟು ಮಾತ್ರ ಮಸ್ತ್ ಮಸ್ತು….
ನೇಪಾಳ ಮೂಲದ ಅತೀ ಕಡು ಬಡ ಕುಟುಂಬದಲ್ಲಿ ಜನಿಸಿದ ದೇವ್ ತಾಪ ತನ್ನ ತಂದೆಯ ಕಷ್ಟ ಮತ್ತು ತನ್ನ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಲು ತನ್ನ ೧೧ ವಯಸ್ಸಿಗೆ ಭಾರತದ ಹಿಮಾಚಲ ಪ್ರದೇಶದ ಹೋಟೆಲ್ ಸೇರಿಕೊಂಡು ಆ ಸಂಬಳದಿಂದ ತನ್ನ ಕುಟುಂಬ ಸಾಕುತ್ತಿದ್ದ. ತನ್ನ ದೇಹದ ಕುಬ್ಜತೆಯನ್ನ ತನ್ನ ಬಹು ದೊಡ್ಡ ದೌರ್ಬಲ್ಯತೆ ಅಂದುಕೊಂಡಿದ್ದ ತಾಪ ತುಂಬಾ ಸಂಕೋಚದ ಸ್ವಭಾವ ಬೆಳಸಿಕೊಂಡು ಅತೀಯಾದ ಲಜ್ಜೆ ಮತ್ತು ಕಡಿಮೆ ಮಾತಾಡುವ ಗುಣ ಅವನೊಳಗಿದ್ದ ಪ್ರತಿಭೆ ಜನರಿಗೆ ಪರಿಚಯವಾಗದಿರಲು ಕಾರಣವಾಯಿತು.
ಭಾರತ ಮತ್ತು ನೇಪಾಳ ಗಡಿ ಭಾಗದಲ್ಲಿ ಮನೆ ಮಾಡಿಕೊಂಡಿದ್ದ ತಾಪ ಕುಟುಂಬ ಆಗಾಗ ತಾಪಾನನ್ನ ಮೇಳ ಜಾತ್ರೆಗಳಿಗೆ ಕರೆದುಕೊಂಡು ಹೋಗುತ್ತಿದ್ದರು ,ನೇಪಾಳ ಹೇಳಿಕೇಳಿ ಕುಸ್ತಿ ಪ್ರಪಂಚದ ಮೂಲ ದೇಶ ,ಅಲ್ಲಿನ ಮೇಳ ಜಾತ್ರೆಗಳಲ್ಲಿ ಕುಸ್ತಿಗಳು ಸಾಮಾನ್ಯವಾಗಿ ನಡೆಯುತ್ತಿತ್ತು ,ಕುಸ್ತಿಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ತಾಪಾನಿಗೆ ಸ್ವಂತ ಸ್ನೇಹಿತರೆ ದೇಹದ ಗಾತ್ರವನ್ನ ಹೀಯಾಳಿಸಿ ನಿರುತ್ಸಾಹ ಪಡಿಸುತ್ತಿದ್ದರು ,ಒಂದು ದಿನ ಮೇಳದಲ್ಲಿ ನಡೆಯುತ್ತಿದ್ದ ಕುಸ್ತಿಯಲ್ಲಿ ಪಾಲ್ಗೊಳ್ಳಲೇ ಬೇಕು ಎಂದು ಹಠಕ್ಕೆ ಬಿದ್ದ ತಾಪ ,ಧೈರ್ಯ ಮಾಡಿ ಬಟ್ಟೆ ಬಿಚ್ಚಿ ಅಖಾಡಕ್ಕೆ ಇಳಿದೇ ಬಿಟ್ಟ ,ಆತನ ದೇಹದ ಗಾತ್ರವನ್ನು ಮೀರಿದ ಆತನ ಕುಸ್ತಿ ಕಂಡು ಜನ ನಿಬ್ಬೆರಗಾಗಿ ನಿಂತು ನೋಡತೊಡಗಿದರು ಶಿಳ್ಳೆ ಚಪ್ಪಾಳೆಗಳ ಸಡ್ಡು ತಾಪಾನನ್ನ ಇನ್ನಷ್ಟು ಪ್ರೋತ್ಸಾಹ ನೀಡಿ ತಾಪ ಅಂದಿನಿಂದ ನೇಪಾಳಿಗರ ಇಷ್ಟದ ಕುಸ್ತಿ ಪಟುವಾಗಿ ಬೆಳೆದ ,ಎಲ್ಲಿಯವರೆಗೂ ಅಂದ್ರೆ ಬಹುಬೇಡಿಕೆಯ ಕುಸ್ತಿ ಪಟುವಾಗಿ ಬೆಳೆದ.
ದೇವ್ ತಾಪ ಪಂಜಾಬ್ ಹರ್ಯಾಣದಲ್ಲಿ ಸಾಕಷ್ಟು ಕುಸ್ತಿ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದು ಅನೇಕ ಅವಾರ್ಡಿಗೂ ಭಾಜನರಾಗಿದ್ದರು ,ವಿಶೇಷವಾಗಿ ,ಕರ್ನಾಟಕದ ಶಿರ್ ಗಾಂವ್ ಪ್ರದೇಶಕ್ಕೂ ಬಂದಿದ್ದ ದೇವ್ ತಾಪ ನನ್ನ ಸ್ವಾಗತಿಸಿದ್ದು ಮಾತ್ರ ಸಾವಿರಾರು ಜನ ,ಕುಸ್ತಿ ಅಂದ್ರೆ ದೇವ್ ತಾಪ ದೇವ್ ಅಂದ್ರೆ ಕುಸ್ತಿ ಅನ್ನೋ ಘೋಷಣೆ ಚಪ್ಪಾಳೆ ಆತನಿಗೆ ಕರ್ನಾಟಕ ತುಂಬಾ ಇಷ್ಟ ಆಗುವಂತೆ ಮಾಡಿ ಬಿಡ್ತು.
ಒಟ್ನಲ್ಲಿ ಇವತ್ತು ಈತನ ಕುಸ್ತಿ ನೋಡಿ ಖುಷಿಯಾಗದವರೇ ಇಲ್ಲ..ದೇವ್ ತಾಪ ಅಂದ್ರೆ, ಜಸ್ಟ್ ಅವನೊಬ್ಬ ಕುಸ್ತಿ ಪಟುವಲ್ಲ..ನೇಪಾಳದ ಹೆಮ್ಮೆ…ಭಾರತದ ಹಿರಿಮೆ…