Freedom TVಸುದ್ದಿ

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭ

ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯ ಇಂದು ನೆರವೇರಿದೆ. ಪ್ರಧಾನಿ ಮೋದಿ ವಿಧಿ ವಿಧಾನಗಳನ್ನು ನಿರ್ವಹಿಸಿದ್ದಾರೆ. ರಾಮಮಂದಿರಕ್ಕೆ ಮೋದಿ ಪ್ರವೇಶದಿಂದ ಹಿಡಿದು ರಾಮಲಲ್ಲಾ ಪ್ರತಿಪ್ಠಾಪನೆವರೆಗೆ ನಡೆದ ಕಾರ್ಯಕ್ರಮಗಳ ಝಲಕ್​ ಇಲ್ಲಿದೆ.

 

ಅಯೋಧ್ಯೆಯಲ್ಲಿ ಅದ್ಧೂರಿ ಆಚರಣೆಗಳ ನಡುವೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ನೂತನವಾಗಿ ನಿರ್ಮಿಸಲಾಗಿರುವ ರಾಮ ಮಂದಿರಕ್ಕೆ ಆಗಮಿಸಿದರು.

ಕ್ರೀಮ್​​ ಕಲರ್​ ಧೋತಿ ಮತ್ತು ಚಿನ್ನದ ಬಣ್ಣದ ಕುರ್ತಾ ಧರಿಸಿ , ಮಡಿಸಿದ ಕೆಂಪು ದುಪಟ್ಟಾದಲ್ಲಿ ಬೆಳ್ಳಿಯ ಛತ್ರಿಯನ್ನು ಹಿಡಿದು ದೇವಾಲಯದ ಗರ್ಭಗುಡಿಗೆ ಮೋದಿ ಬಂದಿದ್ದಾರೆ.

ರಾಮಮಂದಿರದೊಳಗೆ ಬಂದ ಪ್ರಧಾನಮಂತ್ರಿ ಅವರು ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಸಂಕಲ್ಪ ತೆಗೆದುಕೊಂಡರು.

 

ನರೇಂದ್ರ ಮೋದಿ ಅವರು ಸಮಾರಂಭಕ್ಕಾಗಿ ಪೂಜೆ ಸಾಮಾಗ್ರಿಗಳನ್ನು ಹೊತ್ತು ರಾಮಮಂದಿರ ಆವರಣವನ್ನು ಪ್ರವೇಶಿಸಿದರು.

ಮೋದಿ ಅವರು ಅಯೋಧ್ಯೆಯಲ್ಲಿ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಧಾರ್ಮಿಕ ವಿಧಿಗಳಲ್ಲಿ ಭಾಗಿಯಾಗಿದ್ದಾರೆ.

ಅಯೋಧ್ಯೆ ಶ್ರೀರಾಮ ಜನ್ಮ ಭೂಮಿ ದೇಗುಲದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದಿದ್ದು, ಆರ್​ಎಸ್​​ಎಸ್​​ ಮುಖ್ಯಸ್ಥ ಭಾಗವತ್​​ ಕೂಡ ಉಪಸ್ಥಿತರಿದ್ದರು.

Comments (0)

Your email address will not be published. Required fields are marked *

Back to top button