ವಿರಾಟ್​​ ಕೊಹ್ಲಿ ಕ್ರಿಕೆಟ್​​ನಿಂದ ಹಿಂದೆ ಸರಿದಿದ್ದ ಹಿಂದಿನ ವೈಯಕ್ತಿಕ ಕಾರಣ ಕೊನೆಗೂ ರಿವೀಲ್​ ಆಗಿದೆ. ಇಂಗ್ಲೆಂಡ್​​ ಸರಣಿಯಿಂದ ಕೊಹ್ಲಿ ಹೊರ ಬಂದಾಗಲೇ ಎಲ್ಲರೂ 2ನೇ ಮಗುವಿನ ಬಗ್ಗೆ ಊಹೆ ಮಾಡಿದ್ರು. ಕೊನೆಗೂ ಅದು ನಿಜವಾಗಿದೆ. ಉಹಾಪೋಹಗಳಿಗೆಲ್ಲಾ ಬ್ರೇಕ್​ ಬಿದ್ದಿದ್ದು, ಗಂಡು ಮಗುವಿಗೆ ಕೊಹ್ಲಿ ತಂದೆಯಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಅಭಿಮಾನಿಗಳ ಮಿಲಿಯನ್​ ಡಾಲರ್​ ಪ್ರಶ್ನೆಯಾಗಿದ್ದ ವಿಚಾರಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಕೊಹ್ಲಿಗೆ ಏನಾಗಿದೆ.? ಅನುಷ್ಕಾ ಶರ್ಮಾಗೆ ಏನಾಗಿದೆ.? ಕೊಹ್ಲಿ ತಾಯಿಗೆ ಏನೋ ಆಗಿದೆ.? ಹೀಗೆ ಸಾಲು ಸಾಲು ಪ್ರಶ್ನೆಗಳು, ಗೊಂದಲಗಳು ಅಭಿಮಾನಿಗಳು ಹಾಗೂ ಕ್ರಿಕೆಟ್​ ವಲಯದಲ್ಲಿದ್ವು. ಕೊನೆಗೂ ಆ ಅಂತೆ ಕಂತೆಗಳಿಗೆಲ್ಲಾ ಬ್ರೇಕ್​ ಬಿದ್ದಿದೆ.

ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ವೈಯಕ್ತಿಕ ಕಾರಣ ನೀಡಿ ವಿರಾಟ್​ ಕೊಹ್ಲಿ ಹಿಂದೆ ಸರಿದ ಬಳಿಕ 2ನೇ ಮಗುವಿನ ಸುದ್ದಿ ಎಲ್ಲೆಡೆ ಹಬ್ಬಿತ್ತು. ಇದೀಗ ಅದೇ ಸುದ್ದಿ ನಿಜವಾಗಿದೆ. ಫೆಬ್ರವರಿ 15ರಂದು ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಿನ್ನೆ ಸೋಷಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.

ನಮಗೆ ಅತೀವ ಸಂತೋಷವಾಗಿದೆ. ನಮ್ಮ ಹೃದಯ ಅತ್ಯಂತ ಪ್ರೀತಿಯಿಂದ ತುಂಬಿದೆ. ನಿಮ್ಮೊಂದಿಗೆ ಒಂದು ಸಂತೋಷದ ವಿಚಾರವನ್ನ ಹಂಚಿಕೊಳ್ಳಲು ಬಯಸುತ್ತಿದ್ದೇವೆ. ಫೆಬ್ರವರಿ 15ರಂದು ನಾವು ಗಂಡು ಮಗುವನ್ನ ಸ್ವಾಗತಿಸಿದೆವು. ವಮಿಕಾಳ ಸಹೋದರನ ಹೆಸರು ‘ಆಕಾಯ್​’. ನಾವು ನಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಯನ್ನ ಬಯಸುತ್ತಿದ್ದೇವೆ.

ಮಗನಿಗೆ ವಿಶಿಷ್ಟ ಹೆಸರಿಟ್ಟ ವಿರಾಟ್​​ ಕೊಹ್ಲಿ..!

ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ನಿನ್ನೆ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದೇ ತಡ, ಗೂಗಲ್​​ನಲ್ಲಿ ಅಕಾಯ್​ ಹೆಸರಿನ ಅರ್ಥದ ಹುಡುಕಾಟ ಜೋರಾಗಿ ನಡೀತು. ಈಗಲೂ ಕೂಡ ಅದೇ ಹೆಸರು ಟ್ರೆಂಡಿಂಗ್​ನಲ್ಲಿದೆ. ಬಹುತೇಕರು ಕೊಹ್ಲಿ ಹಾಗೂ ಅನುಷ್ಕಾ ಹೆಸರಿನ ಮೊದಲ ಪದ ಸೇರಿಸಿ ನಾಮಕರಣ ಮಾಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು, ಹಲವರು ನಿರ್ವಿಕಾರ ಅಥವಾ ಪೂರ್ಣಚಂದಿರ ಎಂದು ಹೇಳ್ತಿದ್ದಾರೆ.

ಅಂದಹಾಗೆಯೇ ‘ಅಕಾಯ್’ ಎಂಬ ಪದ ‘ಕಾಯಾ’ ಎಂಬ ಹಿಂದಿ ಪದದಿಂದ ಬಂದಿದೆ. ಅಂದರೆ ದೇಹವೆಂದು ಅರ್ಥ. ಅಕೆ ಎಂದರೆ ಅವನ ದೈಹಿಕ ದೇಹಕ್ಕಿಂತ ಹೆಚ್ಚಾಗಿರುವವರು. ಟರ್ಕಿಯ ಭಾಷೆಯಲ್ಲಿ ‘ಅಕೆ’ ಎಂದರೆ ಹೊಡೆಯುವ ಚಂದ್ರ ಎಂದು ಅರ್ಥವಿದೆ.

By admin

Leave a Reply

Your email address will not be published. Required fields are marked *

Verified by MonsterInsights