I N D I A ಒಕ್ಕೂಟ ಛಿದ್ರವಾಗುತ್ತಿರುವುದರಲ್ಲಿ ಬಿಜೆಪಿ ಷಡ್ಯಂತ್ರ ಏನಿಲ್ಲ. ರಾಹುಲ್ ಗಾಂಧಿ ಪ್ರಬುದ್ಧತೆಗೆ ಬೇಸತ್ತು ಅವರವರೇ ಬಿಟ್ಟು ಬರ್ತಾ ಇದ್ದಾರೆ ಅಷ್ಟೇ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ರಾಹುಲ್ ಗಾಂಧಿ ನಂಬಿ ಯಾರೂ ಆ ಒಕ್ಕೂಟದಲ್ಲಿ ಇರಲು, ಸೇರಲು ಹೋಗುತ್ತಿಲ್ಲ ಎಂದು ಜೋಶಿ ಕುಟುಕಿದ್ದಾರೆ. I N D I A ಒಂದು ಅವಕಾಶವಾದಿಗಳ ಕೂಟ ಎಂದು ಆರಂಭದಲ್ಲೇ ಹೇಳಿದ್ದೇವೆ. ಆದ್ದರಿಂದ ಈವರೆಗೂ ಏನೂ ಆಗಿಲ್ಲ. ಮುಂದೆಯೂ ಏನೂ ಆಗುವುದಿಲ್ಲ ಎಂದರು.
ಮಮತಾ ಬ್ಯಾನರ್ಜಿಗೂ ಕಾಂಗ್ರೆಸ್ ಗೂ ಏನು ಜಗಳವಾಗಿದೆ ಗೊತ್ತಿಲ್ಲ. ಅವರೇನು ನಮ್ಮ ಮಾತು ಕೇಳ್ತಾರಾ ಎಂದು ಪ್ರಹ್ಲಾದ್ ಜೋಶಿ ಪ್ರಶ್ನಿಸಿದರು. ಮಮತಾ ಬ್ಯಾನರ್ಜಿಯಿಂದ ನಿಜವಾಗಿಯೂ ತೊಂದರೆ ಅನುಭವಿಸುತ್ತಿರುವುದು ನಾವು. ಅವರ ಅನಾಚಾರದಿಂದ ಬಿಜೆಪಿ ಕಾರ್ಯಕರ್ತರು ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಿರುವಾಗ ಮಮತಾ ಇಂಡಿಯಾ ಒಕ್ಕೂಟ ಬಿಟ್ಟು ಹೊರ ಬರಲು ನಾವೇಕೆ ಷಡ್ಯಂತ್ರ ಮಾಡೋಣ ಎಂದು ಕಾಂಗ್ರೆಸ್ ಪಕ್ಷವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತರಾಟೆಗೆ ತೆಗೆದುಕೊಂಡರು.