ಜನವರಿ 16 ರಂದು, ಭಯೋತ್ಪಾದಕ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್ ಮುಖ್ಯಸ್ಥ ಮತ್ತು ನಿಯೋಜಿತ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ನರೇಂದ್ರ ಮೋದಿಯನ್ನ ಟಾರ್ಗೆಟ್ ಮಾಡಿರೋದಾಗಿ ಬೆದರಿಕೆ ಹಾಕಿದ್ದಾನೆ. ಎಸ್ ಎಫ್ ಜೆ ಸಂಘಟನೆ ಬಿಡುಗಡೆ ಮಾಡಿರೋ ವಿಡಿಯೋ ಮತ್ತು ಬರಹದಲ್ಲಿ ಸೇಡು ತೀರಿಸಿಕೊಳ್ಳೋದಾಗಿ ತಿಳಿಸಿದ್ದಾನೆ.
ಖಲಿಸ್ತಾನಿ ಭಯೋತ್ಪಾದಕ ಮತ್ತು ಕೆನಡಾದ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಪ್ರತೀಕಾರ ಹೇಳುವುದಾಗಿಯೂ ತಿಳಿಸಲಾಗಿದೆ. ಖಲಿಸ್ತಾನ್ ಪರ ಸಿಖ್ಖರ ರಾಡಾರ್ ನಲ್ಲಿ ಪ್ರಧಾನಿ ಮೋದಿಯೂ ಇದ್ದಾರೆ ಎನ್ನಲಾಗಿದೆ. ಗಣರಾಜ್ಯೋತ್ಸವದಂದು, SFJ ನಿಜ್ಜರನ “ಹತ್ಯೆಗೆ” ಪ್ರತೀಕಾರ ತೀರಿಸಿಕೊಳ್ಳುತ್ತದೆ ಮತ್ತು ಖಲಿಸ್ತಾನ್ ಧ್ವಜವನ್ನು ಹಾರಿಸುತ್ತದೆ ಎಂದು ಬೆದರಿಕೆ ಹಾಕಲಾಗಿದೆ.
ಯಾರಿವನು ಗುರುಪತ್ವಂತ್ ಸಿಂಗ್ ಪನ್ನುನ್..?
ಗುರುಪತ್ವಂತ್ ಸಿಂಗ್ ಯುಎಸ್ ಮೂಲದ ಖಲಿಸ್ತಾನಿ ಭಯೋತ್ಪಾದಕ..ಯುಎಸ್ ಮತ್ತು ಕೆನಡಾ ಪೌರತ್ವ ಹೊಂದಿದ್ದಾನೆ..ಯುಎಸ್ ನಲ್ಲಿ ವಕೀಲರಾಗಿಯೂ ಸೇವೆ ಸಲ್ಲಿಸಿದ್ದ.. ಸಿಖ್ಖರ ಹೋರಾಟಗಳಲ್ಲಿ ಮಂಚೂಣಿಯಲ್ಲಿರೋದಾಗಿ ಹೇಳಿಕೊಳ್ತಾನೆ. ವಾಸ್ತವದಲ್ಲಿ ಸಿಖ್ಖರ ಭಾವನೆಗಳನ್ನ ಎನ್ ಕ್ಯಾಶ್ ಮಾಡ್ಕೊಂಡು ಪ್ರತ್ಯೇಕ ಖಲಿಸ್ತಾನಿ ದೇಶದ ಕೂಗು ಎಬ್ಬಿಸುತ್ತಿರುತ್ತಾನೆ. ಆಗಾಗ ಭಾರತದ ವಿಚಾರವಾಗಿ ಎಂಟ್ರಿ ಕೊಟ್ಟು ಬೆದರಿಕೆ ಹಾಕುತ್ತಿರುತ್ತಾನೆ. ಈತನ ದೇಶ ವಿರೋಧಿ ಚಟುವಟಿಕೆಗಳಿಂದಾಗಿ ಭಯೋತ್ಪಾದಕ ಎಂಬ ಹಣೆ ಪಟ್ಟಿ ಕಟ್ಟಲಾಗಿದೆ. ಸಿಖ್ಸ್ ಫಾರ್ ಜಸ್ಟೀಸ್ ಎಂಬ ಸಂಘಟನೆಯನ್ನ ಭಾರತ ಸರ್ಕಾರ ಭಯೋತ್ಪಾದಕ ಸಂಘಟನೆ ಪಟ್ಟಿಗೆ ಸೇರಿಸಲಾಗಿದೆ.
ಜೂನ್ 2023 ರಲ್ಲಿ, ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಕೆನಡಾದಲ್ಲಿ ಅಪರಿಚಿತ ಆಕ್ರಮಣಕಾರರಿಂದ ಕೊಲ್ಲಲ್ಪಟ್ಟ.. ಬಹುಶಃ ಗ್ಯಾಂಗ್ ವಾರ್‌ನ ಪರಿಣಾಮವಾಗಿ ಆತ ಮೃತಪಟ್ಟಿರಬಹುದು. ಆದ್ರೆ ಇದರ ಹಿಂದೆ ಭಾರತದ ಕೈವಾಡವಿದೆ ಎಂದು ಭಾವಿಸಿರೋ ಖಲಿಸ್ತಾನಿ ಹೋರಾಟಗಾರರು, ಇದೇ ವಿಚಾರವಾಗಿ ಪ್ರತೀಕಾರದ ಮಾತು ಆಡುತ್ತಲೇ ಇದ್ದಾರೆ. ಇದೀಗ ಮೋದಿಗೆ ಗಣರಾಜ್ಯ ಬಾವುಟ ಹಾರಿಸದಂತೆ ಬೆದರಿಕೆ ಒಡ್ಡಿದ್ದಾರೆ. ಈ ಹಿನ್ನೆಲೆ ದೇಶದ ಪ್ರಧಾನಿಗೆ ಭದ್ರತೆ ಹೆಚ್ಚಿಸಲಾಗಿದ್ದು, ಕಮಾಂಡೋ ಪಡೆ ಹದ್ದಿನ ಕಣ್ಣಿಟ್ಟುಕೊಂಡು ಕೂತಿದೆ.