ನಿತೀಶ್ 5ನೇ ಜಿಗಿತ ಕಾಂಗ್ರೆಸ್ಗೆ ಮರ್ಮಾಘಾತ

ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಆರ್‌ಜೆಡಿ ಹಾಗೂ ಕಾಂಗ್ರೆಸ್ ಜತೆ ಸೇರಿ ರಚಿಸಿದ್ದ ಸರ್ಕಾರಕ್ಕೆ ಕೈ ಕೊಟ್ಟು, ಮತ್ತೆ ಬಿಜೆಪಿ ಜತೆ ಕೈ ಕುಲುಕಿದ್ದಾರೆ. ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಐಎನ್‌ಡಿಐಎ ಮೈತ್ರಿಕೂಟಕ್ಕೆ ಇದು ದೊಡ್ಡ ಹೊಡೆತವಾಗಿದೆ. ಬಿಜೆಪಿ ಪಾಲಿಗೆ ಇದು ಮಹತ್ವದ ಗೆಲುವೂ ಹೌದು. ಗೆಳೆತನ ಬದಲಿಸುವ ಹವ್ಯಾಸವುಳ್ಳ ನಿತೀಶ್ ಅವರನ್ನು ಬಿಜೆಪಿ ಬಾಗಿಲು ತೆರೆದು ಸ್ವಾಗತಿಸಿದೆ ,ಒಟ್ನಲ್ಲಿ ಅಂದುಕೊಂಡಂತೆ ನಿತೀಶ್ ಕಾಂಗ್ರೆಸ್ ಗುಡ್ ಬಾಯ್ ಹೇಳಿದ್ದಾರೆ

ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ , ಎನ್‌ಡಿಎ ಬಣವನ್ನು ಸೇರಿಕೊಂಡಿದ್ದಾರೆ. ನಿತೀಶ್ ವಿರುದ್ಧ ಕತ್ತಿ ಮಸಿಯುತ್ತಿದ್ದ ಬಿಜೆಪಿ , ಈಗ ಖುದ್ದಾಗಿ ನಿತೀಶ್ ಕುಮಾರ್ ಅವರನ್ನ ತಬ್ಬಿಕೊಂಡು ಅವರನ್ನ ಸ್ವಾಗತಿಸಿದ್ದಾರೆ.
ರಾಜಕೀಯ ಪಡಸಾಲೆಯಲ್ಲಿ ಆಗಾಗ ದೋಸ್ತಿ ಬದಲಾಯಿಸಿಕೊಳ್ಳೋ ಹವ್ಯಾಸವಿದ್ದ ನಿತೀಶ್ ಕುಮಾರ್ ಈಗ ಕಾಂಗ್ರೆಸ್ ಪಕ್ಷಕ್ಕೆ ಮರ್ಮಾಘಾತವನ್ನ ಕೊಟ್ಟು ,ಸದಾ ನಿತೀಶ್ ಕುಮಾರ್ ರನ್ನ ಟೀಕಿಸುತ್ತಿದ್ದ ಬಿಜೆಪಿ ಜೊತೆ ಸಂಧಾನ ಮಾಡಿಕೊಂಡು ಕಾಂಗ್ರೆಸ್ ಹಮಾರಾ ದುಷ್ಮನ್ ಹೈ ಹಾಗಾಗಿ ಅಂತರ ಕಾಯ್ದುಕೊಂಡೆ ಎಂದಿದ್ದಾರೆ.
ಇನ್ನು ಬಂದಾಗ ಒಪ್ಪಿಕೊಳ್ಳುವ ಹಾಗೂ ಬೆನ್ನು ತೋರಿಸಿದಾಗ ನಿಂದನೆ ಮಾಡೋ ಅಭ್ಯಾಸವಿರುವ ಬಿಜೆಪಿಗೆ ಇದು ಹೊಸತನೇನಲ್ಲ. ಆದರೆ ಈ ಬಾರಿಯ ನಿತೀಶ್ ಜಿಗಿತ ರಾಷ್ಟ್ರ ರಾಜಕಾರಣದಲ್ಲಿ ಹೆಚ್ಚಿನ ಸಂಚಲನ ಮೂಡಿಸಿದೆ.
ಕಳೆದ ವರ್ಷ ಜನವರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ನಿತೀಶ್ ಕುಮಾರ್ ಬಗ್ಗೆ ಕಟುವಾಗಿ ಟೀಕಿಸಿದ್ದರು ,ನಿತೀಶ್ ಕುಮಾರ್ ಅವರಿಗೆ ಇನ್ನು ಬಿಜೆಪಿ ಸ್ವಾಗತಿಸಿಸಲ್ಲ ಬಿಜೆಪಿ ಇನ್ನು ನಿತೀಶ್ ರಿಗೆ ಬಾಗಿಲು ತೆರೆಯೋಲ್ಲ ಎಂದಿದ್ದರು.
ಆದ್ರೀಗ ಲೋಕ ಸಭೆ ಚುನಾವಣೆಯ ಲಾಭ ಪಡೆಯಲು ನಿತೀಶ್ ದೋಸ್ತಿಗೆ ಸೈ ಎಂದಿರುವುದು ಅಚ್ಚರಿಯೇ ಸರಿ.
ಬಾಹ್ಯ ಕಿತ್ತಾಟ ,ಭಿನ್ನಾಭಿಪ್ರಾಯ ಏನೇ ಇದ್ದರೂ ಚುನಾವಣೆಯ ಹೊಸ್ತಿಲಲ್ಲಿ ಅದನ್ನ ಮರೆಯಬೇಕು ಎನ್ನುವುದು ರಾಜಕಾರಣಿಗಳ ಹಕ್ಕು ಎಂಬಂತೆ ನಿತೀಶ್ ಬಿಜೆಪಿಗೆ ಸೇರಿದ ವಿಚಾರದಲ್ಲಿ ಸಾಕಷ್ಟು ಜನ ವ್ಯಾಖ್ಯಾನಿಸಿದರು.
ಹತ್ತು ವರ್ಷದಲ್ಲಿ ನಿತೀಶ್ ಕುಮಾರ್ ಅವರದು ಇದೂ ೫ನೇ ಜಿಗಿತ ,ಅವರ ಜನಪ್ರಿಯತೆ ಗಣನೀಯವಾಗಿ ಕುಸಿದು, ಪಕ್ಷದ ಚುನಾವಣಾ ಪ್ರದರ್ಶನ ಶೋಚನೀಯವಾಗಿದ್ದರೂ ಅವರಿಗೆ ಮುಖ್ಯಮಂತ್ರಿ ಸ್ಥಾನ ಅನಾಯಾಸವಾಗಿ ದಕ್ಕುತ್ತಿದೆ. ಹೀಗಾಗಿ ಅವರು ಎನ್‌ಡಿಎ ಹಾಗೂ ಮಹಾ ಘಟಬಂಧನ ಎರಡರಲ್ಲಿಯೂ ಅಧಿಕಾರ ಅನುಭವಿಸುತ್ತಿದ್ದಾರೆ. ಎಂಟು ಬಾರಿ ಸಿಎಂ ಆಗಿ ದಾಖಲೆ ಬರೆದಿರುವ ಅವರು ಈಗ ಪುನಃ ಬಿಜೆಪಿ ಬೆಂಬಲದೊಂದಿಗೆ 9ನೇ ಬಾರಿ ಸಿಎಂ ಆಗಿ ಪದಗ್ರಹಣ ಮಾಡಲು ಸಿದ್ಧತೆ ನಡೆಸಿದ್ದಾರೆ.




