ಕೋಟ್ಯಾಂತರ ಹಿಂದೂಗಳ ಕನಸು ನನಸಾಗಲು ಇನ್ನು ಒಂದೇ ದಿನ ಬಾಕಿ, ಶತಮಾನಗಳ ಹೋರಾಟಕ್ಕೆ ಇನ್ನೇನು ಕೆಲವೇ ಗಂಟೆಗಳಲ್ಲಿ ಫಲ ಸಿಗಲಿದೆ. ಹೌದು, ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮ ಮಂದಿರದ ಉದ್ಘಾಟನೆಗೆ ಇನ್ನೇನು ಕ್ಷಣಗಣನೇ ಆರಂಭವಾಗಿದೆ. ನ ಭೂತೋ ನ ಭವಿಷ್ಯತಿ ಎನ್ನುವಂತೆ ಸಮಾರಂಭ ನಡೆಸಲು ಸಕಲ ಸಿದ್ಧತೆ ನಡೆಯುತ್ತಿದೆ.
ನಾಳೆ ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ನಡೆಯಲಿದೆ..ಪ್ರಧಾನಿ ನರೇಂದ್ರ ಮೋದಿಯವರ ಅವರು ರಾಮಮಂದಿರದ ಉದ್ಘಾಟನೆ ಮಾಡಲಿದ್ದಾರೆ. ಪ್ರಧಾನಿಯವರು ಬೆಳಗ್ಗೆಯಿಂದ ಸಂಜೆ ತನಕ ಅಲ್ಲೇ ಇರಲಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ನಾಳೆ ಮೋದಿಯವರ ದಿನಚರಿ ಹೇಗಿರಲಿದೆ? ಈ ಬಗ್ಗೆ ಮಾಹಿತಿ ಇಲ್ಲಿದೆ
ಪ್ರಧಾನಿ ಮೋದಿಯವರು ನಾಳೆ ಐದು ಗಂಟೆಗಳ ಕಾಲ ಅಯೋಧ್ಯೆಯಲ್ಲಿರಲಿದ್ದಾರೆ. ಬೆಳಿಗ್ಗೆ 10.25 ಕ್ಕೆ ಅಯೋಧ್ಯೆ ಏರ್ ಪೋರ್ಟ್ ಗೆ ಬಂದಿಳಿಯಲಿದ್ದಾರೆ. 10.45 ಕ್ಕೆ ಅಯೋಧ್ಯೆ ಏರ್ ಪೋರ್ಟ್ ನಿಂದ ಅಯೋಧ್ಯೆಗೆ ಹೆಲಿಪ್ಯಾಡ್ ಮೂಲಕ ಬರಲಿದ್ದಾರೆ.
ಪ್ರಧಾನಿ ಮೋದಿ ಬೆಳಿಗ್ಗೆ 10.55 ಕ್ಕೆ ರಾಮಜನ್ಮಭೂಮಿಗೆ ಆಗಮಿಸಲಿದ್ದಾರೆ. ಬೆಳಿಗ್ಗೆ 11 ರಿಂದ 12 ರವರೆಗೆ ಅಯೋಧ್ಯೆಯ ರಾಮಮಂದಿರದ ವೀಕ್ಷಣೆ ಮಾಡಲಿದ್ದಾರೆ. ಮಂದಿರದ ಕಾರ್ಮಿಕರ ಜೊತೆಗೆ ಮೋದಿ ಮಾತುಕತೆ ನಡೆಸಲಿದ್ದಾರೆ. ಬಳಿಕ ಮಧ್ಯಾಹ್ನ 12.05 ರಿಂದ 12.55 ರವರೆಗೆ ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ಇದರಲ್ಲಿ ಮೋದಿ ಭಾಗಿಯಾಗಲಿದ್ದಾರೆ.ಪ್ರಾಣ ಪ್ರತಿಷ್ಠೆಯ ಕಾರ್ಯಕ್ರಮದಲ್ಲಿ 50 ನಿಮಿಷಗಳ ಕಾಲ ಮೋದಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 1 ರಿಂದ 2 ಗಂಟೆಗೆ ರಾಮಮಂದಿರದ ಆವರಣದ ಸಾರ್ವಜನಿಕ ಸಭೆಯಲ್ಲಿ ಮೋದಿ ಭಾಗಿಯಾಲಿದ್ದಾರೆ. ಮಧ್ಯಾಹ್ನ 2.10 ಕ್ಕೆ ಕುಬೇರ ತಿಲದಲ್ಲಿ ಶಿವ ಮಂದಿರದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಅಯೋಧ್ಯೆಯಿಂದ ದೆಹಲಿಯತ್ತ ಪ್ರಧಾನಿ ಮೋದಿ ವಿಮಾನದಲ್ಲಿ ಪ್ರಯಾಣ ಬೆಳೆಸಲಿದ್ದಾರೆ.