ಅಯೋಧ್ಯೆ : ಅಯೋಧಯೆ ರಾಮ ಮಂದಿರ ಗರ್ಭಗುಡಿಯಲ್ಲಿ ಇರಿಸಲಾದ ರಾಮ ಲಲ್ಲಾನ ವಿಗ್ರಹದ ಮೊದಲ ಚಿತ್ರಗಳು ಹೊರಬಂದಿವೆ. 51 ಇಂಚಿನ ರಾಮ ಲಲ್ಲಾ ವಿಗ್ರಹವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ನಿಲ್ಲಿಸಿರುವ ಭಂಗಿಯಲ್ಲಿ ಕಾಣಬಹುದು. ರಾಮ ಲಲ್ಲಾ ವಿಗ್ರಹವು 150 ಕೆಜಿಗಿಂತ ಹೆಚ್ಚು ತೂಕವಿದ್ದು, ಇದನ್ನು ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ್ದಾರೆ.
ಭವ್ಯವಾದ ಶ್ರೀರಾಮ ಮಂದಿರದ ಗರ್ಭಗುಡಿಯ ಪೀಠದ ಮೇಲೆ ರಾಮಲಲ್ಲಾ ನೂತನ ವಿಗ್ರಹವನ್ನು ಇರಿಸಲಾಗಿದೆ. ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿ ಬಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ಅವರು ಸಮಗ್ರ ಪ್ರಕ್ರಿಯೆಯ ನಂತರ ವಿಗ್ರಹವನ್ನು ಆಯ್ಕೆ ಮಾಡಿದ್ದಾರೆ. ಗರ್ಭಗುಡಿಯ ಪೀಠದಲ್ಲಿ ಪ್ರತಿಷ್ಠಾಪಿಸಲಾಗಿರುವ ಬಾಲರಾಮನ ಮೂರ್ತಿ ಚಿತ್ರ ಬಿಡುಗಡೆಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾದ ಭವ್ಯವಾದ ರಾಮಮಂದಿರದಲ್ಲಿ ಭಗವಾನ್ ರಾಮ ಲಾಲ್ಲಾ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಈ ಮೂರ್ತಿಗೆ ಪ್ರಾಣ ಪ್ರತಿಷ್ಠೆಯ ಕಾರ್ಯ ಜನವರಿ 22ರಂದು ನಡೆಯಲಿದೆ. ರಾಮ ಲಾಲ್ಲಾ ಮೂರ್ತಿಯನ್ನು ಗುರುವಾರ ಗರ್ಭಗುಡಿಗೆ ತರಲಾಯಿತು. ಇದಾದ ನಂತರ ಕುಶಲಕರ್ಮಿಗಳು ವಿಗ್ರಹವನ್ನು ಪೀಠದ ಮೇಲೆ ಇರಿಸಿದರು.
ಈ ಪ್ರಕ್ರಿಯೆಯು ಸುಮಾರು ನಾಲ್ಕು ಗಂಟೆಗಳನ್ನು ತೆಗೆದುಕೊಂಡಿತು. ಇದರ ನಂತರ ವಿಗ್ರಹವನ್ನು ಧಾನ್ಯಗಳು, ಹಣ್ಣುಗಳು, ತುಪ್ಪ ಮತ್ತು ಪರಿಮಳಯುಕ್ತ ನೀರಿನಲ್ಲಿ ಇರಿಸಲಾಯಿತು.