ಮೈಸೂರು; SSLC ವಿದ್ಯಾರ್ಥಿಗಳ ಮನೆಗಳಿಗೆ ಬೆಳ್ಳಂಬೆಳಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿದ್ದಾರೆ. SSLC ಪರೀಕ್ಷೆ ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳು ಬೆಳಗಿನ ಜಾವ ಓದುತ್ತಿರುವ ಬಗ್ಗೆ ಹಾಗೂ ಅವರ ಸಿದ್ಧತೆಯ ಬಗ್ಗೆ ವಿದ್ಯಾರ್ಥಿ ಹಾಗೂ ಪೋಷಕರಿಗೆ ಜಾಗೃತಿ ಮೂಡಿಸಿದ್ದಾರೆ.

ಮೈಸೂರಿನ ದಕ್ಷಿಣ ವಲಯ ಬಿಇಒ, ಸಿ.ಎನ್. ರಾಜುರವರು ವಿದ್ಯಾರ್ಥಿಗಳಿಗೆ ಬೆಳಗಿನ ಜಾವ ಯಾವ ವಿಷಯ ಬಗ್ಗೆ ಅಭ್ಯಾಸ ಮಾಡಬೇಕು ಎನ್ನುವುದನ್ನು ಪರಿಶೀಲಿಸಿ ಖಾತ್ರಿ ಪಡಿಸಿಕೊಳ್ಳಲಾಯಿತು. ಜತೆಗೆ ಪೋಷಕರಿಗೆ ಪರೀಕ್ಷೆ ಬಗ್ಗೆ ತಿಳಿ ಹೇಳಿದರು. ಮಕ್ಕಳಿಗೆ ಬೇರೆ ಇತರ ಕೆಲಸ ಕಾರ್ಯಗಳನ್ನು ನೀಡದೆ ಓದುವ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ಪೋಷಕರಿಗೆ ಜಾಗೃತಿ ಮೂಡಿಸಿದರು.
ನಗರದ ಜನತಾ ನಗರ, ವಸಂತನಗರ, ತೊಣಚಿಕೊಪ್ಪಲಿನಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮನೆಗಳಿಗೆ ಬಿಇಓ ರಾಜು ಭೇಟಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.


