ಸುದ್ದಿ

ಹೃದಯವಂತ ಕನ್ನಡಿಗರ ಬಳಗದಿಂದ ಪಕ್ಷಿ , ಪ್ರಾಣಿಗಳಿಗೆ ನೀರು, ಆಹಾರ ಪೂರೈಕೆ

ಬೇಸಿಗೆಕಾಲ ಆರಂಭವಾದದ್ದರಿಂದ ಬಿಸಿಲು ಜಾಸ್ತಿ ಉರಿಯುತ್ತಿರುವ ಈ ಸಂದರ್ಭದಲ್ಲಿ ನಮ್ಮ ಮೈಸೂರು ಹೃದಯವಂತ ಕನ್ನಡಿಗರ ಬಳಗದಿಂದ ಪಕ್ಷಿಗಳಿಗೆ ಹಾಗೂ ಪ್ರಾಣಿಗಳಿಗೆ ನೀರು ಆಹಾರ ಪೂರೈಸಲಾಯಿತು. ಕಾಡಿನಲ್ಲಿ ನೀರು ಹಾಗೂ ಆಹಾರ ಇಲ್ಲದ ಕಾರಣ ಪ್ರಾಣಿಗಳು, ಪಕ್ಷಿಗಳು ಬದುಕಲು ಸಾಧ್ಯವಿಲ್ಲ. ಆದ್ದರಿಂದ ಪಕ್ಷಿಗಳಿಗೆ ನೀರು ಕಾಳು ಬಾಳೆಹಣ್ಣು ಹಾಕುವ ಮೂಲಕ ಈ ನಾಡಿನ ಜನತೆಯಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ದಯವಿಟ್ಟು ಪಕ್ಷಿಗಳಿಗೆ ಹಾಗೂ ಪ್ರಾಣಿಗಳಿಗೆ ನೀರು ಮತ್ತು ಆಹಾರ ನೀಡಿ, ನಿಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.

ಈ ಮೂಲಕ ನಮ್ಮ ಮೈಸೂರು ಹೃದಯವಂತ ಕನ್ನಡಿಗರ ಬಳಗದಿಂದ ಯಶಸ್ವಿಗೊಳಿಸಲಾಯಿತು. ಇದೆ ಸಂದರ್ಭದಲ್ಲಿ ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷರು ಡಿಪಿಕೆ ಪರಮೇಶ್ ರವಿ ಗಿರೀಶ್ ಬಸವಣ್ಣ ಕಾಮತ್ ರಾಜೇಂದ್ರ ಶಿವಣ್ಣ ರಾಚಪ್ಪ ಮಹದೇವಸ್ವಾಮಿ ಉಪಸ್ಥಿತರಿದ್ದರು.

Comments (0)

Your email address will not be published. Required fields are marked *

Back to top button